ರಾಜ್ಯ ಸುದ್ದಿ

ಕರ್ನಾಟಕಕ್ಕೆ ಗುಜರಾತ್ ಮಾದರಿಯಲ್ಲ, ಇಲ್ಲಿನ ಬಾಬಾ ಬುಡಾನರ ಹಾಗೂ ದತ್ತರ ಸೌಹಾರ್ದ ಗುಜರಾತ್ ಗೆ ಮಾದರಿಯಾಗಲಿ : ಜಿಗ್ನೇಶ್ ಮೇವಾನಿ

ವರದಿಗಾರ (ಡಿ 29 ) : ‘ಕರ್ನಾಟಕಕ್ಕೆ ಗುಜರಾತ್ ಯಾವ ರೀತಿಯಲ್ಲೂ ಮಾದರಿಯಾಗುವುದು ಬೇಡ. ಆದರೆ ಕರ್ನಾಟಕದ ಬಾಬಾ ಬುಡಾನರ ಹಾಗೂ ದತ್ತರ ಸೌಹಾರ್ದತೆ ಗುಜರಾತ್ ಗೆ ಮಾದರಿಯಾಗಲಿ’ ಎಂದು ಗುಜರಾತಿನ ವಡ್ಗಾಂವ್ ಕ್ಷೇತ್ರದ ನೂತನ ಶಾಸಕ ಹಾಗೂ ದಲಿತ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿ ಇಂದು ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಅವರು ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ‘ಹಿಂದಣ ನೋಟ ಮುಂದಣ ಹೆಜ್ಜೆ’ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇದು ಉಮಾಭಾರತಿಯ ಕರ್ನಾಟಕವಲ್ಲ, ಬದಲು ಗೌರಿ ಲಂಕೇಶ್ ರವರ ಕರ್ನಾಟಕವಾಗಿದೆ. ಇಲ್ಲಿನ ನಾಗರಿಕ ಸಮಾಜ ಬಹಳ ಕ್ರಿಯಾಶೀಲವಾಗಿ ಹಲವಾರು ಸೌಹಾರ್ದದ ಪರವಾಗಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆದುದರಿಂದ ಈ ಕರ್ನಾಟಕವನ್ನು ನಾವೆಲ್ಲಾ ಉಳಿಸಿಕೊಳ್ಳಬೇಕಾಗಿದೆ ಎಂದು ಜಿಗ್ನೇಶ್ ಮೇವಾನಿ ಕರೆ ಕೊಟ್ಟರು.

ನಾನು ಮುಂಬರುವ ದಿನಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕದ ವಿಧಾನಸಭಾ ಚುನಾವಣೆಗಳ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ. ನನ್ನ ಬೆಂಬಲವು ಯಾವ ಪಕ್ಷಕ್ಕೆ ಲಾಭದಾಯಕವಾಗಲಿದೆಯೋ ಎನ್ನುವುದು ನನಗೆ ಮುಖ್ಯವಲ್ಲ. ಆದರೆ ಫ್ಯಾಸಿಸ್ಟ್ ಅಜೆಂಡಾದೊಂದಿಗಿರುವ ಬಿಜೆಪಿಯನ್ನು ಸೋಲಿಸುವುದು ನನಗೆ ಮುಖ್ಯವಾಗಿದೆ ಎಂದವರು ಇದೇ ವೇಳೆ ಹೇಳಿದರು.

 

ಫ್ಯಾಸಿಸ್ಟ್ ವಿರೋಧಿ ಎಂದರೆ ಕಾಂಗ್ರೆಸ್ ಪರವಲ್ಲ : ಜಿಗ್ನೇಶ್

‘ನಾನು ಯಾವತ್ತೂ ಫ್ಯಾಸಿಸ್ಟ್ ಗಳನ್ನು ವಿರೋಧಿಸುವವನು. ಹಾಗೆಂದ ಮಾತ್ರಕ್ಕೆ ಕಣ್ಣು ಮುಚ್ಚಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತೇನೆಂದು ಅದರ ಅರ್ಥವಲ್ಲ. ಇಲ್ಲಿ ಹತ್ಯೆಯಾಗಿರುವ ಗೌರಿ ಲಂಕೇಶ್ ಹಾಗೂ ಇತ್ತೀಚೆಗೆ ಬಿಜಾಪುರದ ವಿಜಯಪುರದಲ್ಲಿ ಅತ್ಯಾಚಾರಕ್ಕೊಳಪಟ್ಟು ಹತ್ಯೆಯಾಗಿರುವ ದಾನಮ್ಮಳ ಕುರಿತಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರ ಕಠಿಣ ನಿಲುವುಗಳನ್ನು ತಳೆಯಬೇಕಾಗಿದೆ. ಫ್ಯಾಸಿಸ್ಟರ ವಿರುದ್ಧದ ನಮ್ಮ ನಿಲುವು ಎಂದೂ ಕಾಂಗ್ರೆಸ್ ಪರವಾಗಿರುವ ಅನುಕೂಲ ಸಿಂಧು ನಿಲುವೆಂದು ತಪ್ಪು ತಿಳಿಯುವುದು ಬೇಡ. ಆದುದರಿಂದ ಇಲ್ಲಿನ ಸರಕಾರ ಆದಷ್ಟು ಬೇಗ ಗೌರಿ ಲಂಕೇಶ್ ಹತ್ಯಾ ಆರೋಪಿಗಳನ್ನು ಬಂಧಿಸಬೇಕಾಗಿದೆ’ ಎಂದು ಜಿಗ್ನೇಶ್ ಮೇವಾನಿ ಇದೇ ವೇಳೆ ರಾಜ್ಯ ಸರಕಾರಕ್ಕೂ ಬಿಸಿ ಮುಟ್ಟಿಸುವ ಹೇಳಿಕೆಯನ್ನು ನೀಡಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group