ರಾಷ್ಟ್ರೀಯ ಸುದ್ದಿ

ಯೋಗಿ ಮೇಲಿರುವ ಕೇಸನ್ನು ಕೈಬಿಡಲು ಯೋಗಿ ಸರಕಾರದ ಆಜ್ಞೆ

ವರದಿಗಾರ(27-12-2017): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಮೇಲಿರುವ ಕೇಸನ್ನು ಕೈಬಿಡುವಂತೆ ಯೋಗಿ ಸರಕಾರ ಆಜ್ಞೆ ನೀಡಿರುವುದು ಬೆಳಕಿಗೆ ಬಂದಿದೆ.

1995ರ ಮೇ 27ರಂದು ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಿಪಿಗಂಜ್ ಪೊಲೀಸ್ ಠಾಣೆಯಲ್ಲಿ ಯೋಗಿ ಆದಿತ್ಯನಾಥ್,ಶಿವ ಪ್ರತಾಪ್ ಶುಕ್ಲಾ(ಈಗ ಕೇಂದ್ರ ಸಚಿವ), ಶೀತಲ್ ಪಾಂಡೆ(ಬಿಜೆಪಿ ಶಾಸಕ) ಹಾಗೂ ಇತರ 10 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್188ರ ಪ್ರಕಾರ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಾಜರಾಗದ ಕಾರಣ ಎರಡು ವರ್ಷಗಳ ಹಿಂದೆ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿಗೊಳಿಸುವಂತೆ ನಿರ್ದೇಶಿಸಿದ್ದರೂ ವಾರಂಟ್ ಜಾರಿಗೊಂಡಿರಲಿಲ್ಲ.

ಇದೀಗ, ಉತ್ತರ ಪ್ರದೇಶದ ಸರಕಾರವು ಡಿಸೆಂಬರ್ 20ರಂದು ಪ್ರಾಸಿಕ್ಯೂಶನ್ ಅಧಿಕಾರಿಗಳಿಗೆ ಕೇಸನ್ನು ಹಿಂಪಡೆಯುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಆಜ್ಞೆ ನೀಡಿತ್ತು. ಅಕ್ಟೋಬರ್ 27ರಂದು ಜಿಲ್ಲಾ ನ್ಯಾಯಾಲಯದಿಂದ ಬಂದ ಪತ್ರದ ಆಧಾರದ ಮೇಲೆ ಹಾಗೂ ಕೇಸನ್ನು ಮರುಪರಿಶೀಲಿಸಿದ ಬಳಿಕ ಸರಕಾರವು ಕೇಸನ್ನು ಕೈಬಿಡಲು ತೀರ್ಮಾನಿಸಿದೆ ಎಂದು ಆಜ್ಞೆಯಲ್ಲಿ ತಿಳಿಸಲಾಗಿದೆ.

ಸರಕಾರದ ಆಜ್ಞೆ ಪ್ರಕಾರ ನ್ಯಾಯಾಲಯದ ಚಳಿಗಾಲದ ರಜಾ ಅವಧಿಯ ನಂತರ ಕೇಸನ್ನು ಕೈಬಿಡಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿ ಪ್ರಾಸಿಕ್ಯೂಶನ್ ಅಧಿಕಾರಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group