ಸಾಮಾಜಿಕ ತಾಣ

ಹಿಂದುತ್ವವಾದಿಗಳು ಬಯಸುವುದು ‘ಹಿಂದೂ ಪಾಕಿಸ್ತಾನ’ವನ್ನು : ಅನಂತ್ ಹೇಳಿಕೆಗೆ ಶಶಿ ತರೂರ್ ಎದಿರೇಟು

ವರದಿಗಾರ (ಡಿ 27 ) : ಸಂವಿಧಾನವನ್ನು ಬದಲಿಸಲಿಕ್ಕಾಗಿಯೇ ನಾವು ಬಂದಿರುವುದು ಹಾಗೂ ಜಾತ್ಯತೀತತೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗ್ಡೆಯ ಹೇಳಿಕೆಯ ವಿರುದ್ಧ ಇಂದಿಲ್ಲಿ ಕಿಡಿ ಕಾರಿರುವ ಮಾಜಿ ಕೇಂದ್ರ ಸಚಿವ ಹಾಗೂ ಕೇರಳ ಸಂಸದ ಶಶಿ ತರೂರ್, ‘ಹಿಂದುತ್ವವಾದಿಗಳು, ಭಾರತವು ಎಲ್ಲರನ್ನೂ ಒಳಗೊಂಡ ಪ್ರದೇಶವೆಂಬ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ ಹಾಗೂ ಅವರು ಬಯಸುವುದು ಇಲ್ಲೊಂದು ‘ಹಿಂದೂ ರಾಷ್ಟ್ರ ಅಥವಾ ಹಿಂದು ಪಾಕಿಸ್ತಾನ’ವನ್ನಾಗಿದೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕಿಡಿ ಕಾರಿದ್ದಾರೆ.

ನಮಗೆಲ್ಲರಿಗೂ ತಿಳಿದ ಹಾಗೆ ಸಂವಿಧಾನವನ್ನು ನೂರಕ್ಕಿಂತಲೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ. ಒಂದು ಚುನಾಯಿತ ಸರಕಾರಕ್ಕೆ ಅದನ್ನು ಮಾಡುವ  ಎಲ್ಲಾ ಅರ್ಹತೆಗಳು ಇದೆ. ಆದರೆ ಅದರ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಿಂದುತ್ವವಾದಿಗಳು, ಭಾರತವೊಂದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಾಗೂ ಎಲ್ಲಾ ರೀತಿಯ ಜನರು ಇರುವ ಪ್ರದೇಶವೆಂಬ ಕಲ್ಪನೆಯನ್ನು ಒಪ್ಪದೆ, ಇಲ್ಲೊಂದು ‘ಹಿಂದೂ ರಾಷ್ಟ್ರ ಅಥವಾ ಹಿಂದೂ ಪಾಕಿಸ್ತಾನ’ ನಿರ್ಮಾನಕ್ಕೆ ಕೈ ಹಾಕಿದ್ದಾರೆಂದು ಟ್ವೀಟ್ ಮಾಡಿದ್ದಾರೆ. ಅವರು ಪತ್ರಕರ್ತ ಶೇಖರ್ ಗುಪ್ತಾರವರ,  ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯ ಕುರಿತಾಗಿನ ಟ್ವೀಟ್ ಗೆ ಉತ್ತರಿಸುತ್ತಿದ್ದರು.

ಸಂಸತ್ ನಲ್ಲೂ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದ್ದು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು. ರಾಜ್ಯಸಭೆಯಲ್ಲಿ ಗುಲಾಮ್ ನಬಿ ಆಝಾದ್ ಅವರು,  ‘ಅನಂತ್ ಕುಮಾರ್ ಸಂಸತ್ ಸದಸ್ಯನಾಗಿ ಮುಂದುವರಿಯುವ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಸಂಸದೀಯ ವ್ಯವಹಾರಗಳ ರಾಯ ಸಚಿವ ವಿಜಯ್ ಗೊಯೆಲ್ ಹೇಳಿಕೆಯೊಂದನ್ನು ನೀಡಿ, ‘ ಸರಕಾರ,   ಸಂವಿಧಾನ ಬದಲಾವಣೆಯ ಕುರಿತಂತೆ ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆಯನ್ನು ಒಪ್ಪುವುದಿಲ್ಲ’ ಎಂದಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group