ವರದಿಗಾರ (ಡಿ.27): ‘ಆರೆಸ್ಸೆಸ್ ಬಗ್ಗೆ ನಿನ್ನೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಿರಿ. ಯಾಕೆ, ಅವರನ್ನು ಕಂಡರೆ ಭಯನಾ’ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನನಗ್ಯಾಕ್ರಿ ಭಯ ? ಚುನಾವಣೆ ಸಮಯದಲ್ಲಿ ಆರೆಸ್ಸೆಸ್ ನವರು ರಾಜ್ಯಕ್ಕೆ ಬಂದು ಬೆಂಕಿ ಹಚ್ಚಿ ಬಿಟ್ಟಾರು. ಹುಷಾರಾಗಿರಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ’ ಎಂದು ಸ್ಪಷ್ಟ ಪಡಿಸಿದ್ದಾರೆ.
ಅವರು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬಿಜೆಪಿ ಪ್ರತಿಪಾದಿಸುವ ಹಿಂದುತ್ವವನ್ನು ವಿರೋಧಿಸುತ್ತೇನೆ, ಜಾತ್ಯತೀತ ತತ್ವಕ್ಕೆ ಬದ್ಧನಾಗಿದ್ದೇನೆ. ‘ಕಾಂಗ್ರೆಸ್ ಮೃದು ಹಿಂದುತ್ವ ಪಾಲಿಸುತ್ತಿದೆ’ ಎಂಬ ಮಾತು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಕೇಳುವ ಮೃದು ಹಿಂದುತ್ವ ಯಾವುದೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
