ವರದಿಗಾರ (ಡಿ.26): ‘ಸಂವಿಧಾನವನ್ನು ಬದಲಾಯಿಸಲು ನಾವು ಬಂದಿರುವುದು’ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ‘ಹಿಂದೂ ಎಂದು ಹೇಳಲು ಅನಂತ್ ಕುಮಾರ್ ನಾಲಾಯಕ್’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವರು ಕೆಪಿಸಿಸಿ ಕಚೇರಿಯಲ್ಲಿ ಕರದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ‘ಜಾತ್ಯತೀತ ತಳಹದಿ ಮೇಲೆ ದೇಶದ ಸಂವಿಧಾನ ರಚನೆಯಾಗಿದೆ. ಅದನ್ನು ಮತ್ತು ಜಾತ್ಯತೀತ ವ್ಯಕ್ತಿಗಳನ್ನು ಹೀಯಾಳಿಸುವ ಕೆಲಸವನ್ನು ಸಚಿವರು ಮಾಡಿದ್ದಾರೆ’ ಎಂದು ಅನಂತ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಚಿವರ ಈ ವಿಕೃತ ಮನಸ್ಸು ಬಿಜೆಪಿಯ ತತ್ವ, ಸಿದ್ಧಾಂತವನ್ನು ಬಿಂಬಿಸುತ್ತದೆ’. ‘ಅನಂತ್ ಕುಮಾರ್ ಹೆಗಡೆ ಕೌಶಲ ಅಭಿವೃದ್ಧಿ ಮಾಡಲು ಸಚಿವರಾಗಿದ್ದಾರೊ, ದ್ವೇಷ ಹಚ್ಚಲು ಸಚಿವರಾಗಿದ್ದಾರೊ’ ಎಂದು ಪ್ರಶ್ನಿಸಿದ್ದಾರೆ. ‘ಹಿಂದೂ ಧರ್ಮದಲ್ಲಿ ಅಸಹಿಷ್ಣುತೆಗೆ ಅವಕಾಶವಿಲ್ಲ. ನೀವು, ಯೋಗಿ ಆದಿತ್ಯನಾಥ್ ಆಡಿರುವ ಮಾತುಗಳಿಂದ ಪಕ್ಷದ ಕಾರ್ಯಕರ್ತರಲ್ಲದವರಿಗೆ ನೋವಾಗಿದೆ ಎಂದು ಹೇಳಿದ್ದಾರೆ.
ಭೂಪಸಂದ್ರ ಭೂಮಿ ಡಿನೋಟಿಫೈ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಮುಖಂಡರು ಬೋಗಸ್ ಆರೋಪ ಮಾಡುತ್ತಿದ್ದಾರೆ. ‘ಬಿಜೆಪಿ ಅಂದರೆ ಬೋಗಸ್ ಜನತಾ ಪಕ್ಷ’ ಎಂದು ನಾಮಕರಣ ನೀಡಿದ್ದಾರೆ.
