ರಾಜ್ಯ ಸುದ್ದಿ

ನೀರು ಕೊಡಿಸಲು ಆಗಲ್ಲ ಎಂದರೆ ವಾಪಸ್ ಹೋಗುತ್ತೇವೆ. ಲಘುವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ, ಹುಷಾರ್: ಬಿಜೆಪಿಗೆ ರೈತರ ಎಚ್ಚರಿಕೆ

ನೀರು ಕೊಡಿಸುವ ಬಗ್ಗೆ ಸ್ಪಷ್ಟಪಡಿಸಿ: ಬಿಜೆಪಿ ಕಚೇರಿ ಮುಂದೆ ಪ್ರತಿಭಟನಾ ನಿರತ ರೈತರ ಒತ್ತಾಯ

ವರದಿಗಾರ(ಡಿ.25): ನೀರು ಕೊಡಿಸಲು ಆಗಲ್ಲ ಎಂದರೆ ವಾಪಸ್ ಹೋಗುತ್ತೇವೆ. ಲಘುವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ, ಹುಷಾರ್ ಎಂದು ಬಿಜೆಪಿ ನಾಯಕರಿಗೆ ಮಹದಾಯಿ ಹೋರಾಟ ನಿರತ ರೈತರು ಎಚ್ಚರಿಕೆ ನೀಡಿದ್ದಾರೆ.

ಮಹದಾಯಿ ಹೋರಾಟಗಾರ ಬಗ್ಗೆ ಹುಡುಗಾಟಿಕೆಯಿಂದ ಹಗುರವಾಗಿ ಮಾತನಾಡಬೇಡಿ. ನೀರು ಕೊಡಿಸಲು ಸಾಧ್ಯವಿದೆಯಾ ಅಥವಾ ಸಾಧ್ಯವಿಲ್ಲ ಎಂಬುವದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸುವಂತೆ ವಿರೇಶ್ ಸೊಬರದ ಮಠ ಒತ್ತಾಯಿಸಿದ್ದಾರೆ

ಬೆಂಗಳೂರಿನ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಚೇರಿ ಮುಂಭಾಗ  ಮಹದಾಯಿ ರೈತರು ನಡೆಸುತ್ತಿರುವ ಆಹೋರಾತ್ರಿ ಹೋರಾಟ ಮುಂದುವರಿದಿದೆ. 

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಹನುಮಂತಪ್ಪ ಎಂಬವರು ಸೋಮವಾರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರತಿಭಟನಾ ನಿರತ ರೈತರು  ಕಳೆದೆರೆಡು ದಿನಗಳಿಂದ ಚಳಿಯನ್ನೂ ಲೆಕ್ಕಿಸದೆ, ಸ್ಥಳ ಬಿಟ್ಟು ಕದಲದೆ ಪ್ರತಿಭಟನೆ ನಡೆಸುತ್ತಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group