ವರದಿಗಾರ (ಡಿ.24): ಅರುಣಾಚಲ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
ಪಕ್ಕೆ ಕೆಸ್ಸಾಂಗ್ ಹಾಗೂ ಲಿಕಾಬಲಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಜಯಭೇರಿ ಬಾರಿಸುವ ಮೂಲಕ 60 ಸದಸ್ಯರ ವಿಧಾನಸಭೆಯಲ್ಲಿ ತನ್ನ ಸಂಖ್ಯೆಯನ್ನು 49ಕ್ಕೆ ಏರಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ 9 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ ನ ಓರ್ವ ಶಾಸಕ ಹಾಗೂ ಇನ್ನೋರ್ವ ಸ್ವತಂತ್ರ ಶಾಸಕ ಉಳಿದೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಪಕ್ಕೆ ಕೆಸ್ಸಾಂಗ್ ಕ್ಷೇತ್ರದಲ್ಲಿ ಬಿಜೆಪಿಯ ಬಿಆರ್ ವಘೆ ತನ್ನ ಏಕೈಕ ಎದುರಾಳಿ, ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನ ಕಮೆಂಗ್ ದೋಲೋ ರನ್ನು 475 ಮತಗಳ ಅಂತರದಿಂದ ಸೋಲಿಸಿದರು.
ಲಿಕಾಬಲಿ ಕ್ಷೇತ್ರದಲ್ಲಿ ಬಿಜೆಪಿಯ ಕರ್ದೋ ನಿಂಗ್ಯೋರ್ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ ನ ಗುಮ್ಕೆ ರಿಬಾರನ್ನು 305 ಮತಗಳ ಅಂತರದಿಂದ ಸೋಲಿಸಿದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೇವಲ 362 ಮತಗಳು ಲಭಿಸಿದೆ.
