ವರದಿಗಾರ (ಡಿ.24): ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾಗಬೇಕು, ಬದಲಾಗುತ್ತದೆ. ಸಂವಿಧಾನ ಬದಲಾಯಿಸುವುದಕ್ಕೆ ನಾವು ಬಂದಿರುವುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.
ಅವರು ಕೊಪ್ಪಳದ ಕುಕನೂರಿನಲ್ಲಿ ಯುವಜನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವ ಸಂದರ್ಭ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಅಪ್ಪ ಅಮ್ಮನ ರಕ್ತದ ಗುರುತು ಇಲ್ಲದವರು ಜಾತ್ಯತೀತರು ಅಂತ ಹೇಳುತ್ತಿದ್ದಾರೆ. ಜಾತ್ಯತೀತರು ಎಂದು ಕರೆಕೊಂಡರೆ ಅವರ ರಕ್ತದ ಬಗ್ಗೆ ಅನುಮಾನ ಬರುತ್ತದೆ ಎಂದು ಹೇಳಿದ್ದಾರೆ. ಜಾತ್ಯತೀತರು ಎನ್ನುವರು ಈ ನನ್ನ ಮಕ್ಕಳು, ನಾನೊಬ್ಬ ಮುಸ್ಲಿಂ, ಕ್ರೈಸ್ತ, ಲಿಂಗಾಯತ ಸೇರಿ ಯಾವುದೇ ಜಾತಿ ಹೇಳಿದರೆ ನನ್ನ ತಕರಾರಿಲ್ಲ ಎಂದಿದ್ದಾರೆ.
ಇಸ್ಲಾಂನ ಖಡ್ಗ ಜಗತ್ತು ಗೆದ್ದು ಭಾರತಕ್ಕೆ ಬಂದಾಗ ದಿಗ್ಭ್ರಮೆಯಾಗಿ ಗಂಗೆಯಲ್ಲಿ ತೊಳೆದು ಹೋಗಿತ್ತು. 800 ವರ್ಷಗಳ ಆಕ್ರಮಣದಿಂದ ಇಡೀ ಏಷ್ಯಾವನ್ನು ಆಕ್ರಮಿಸಿದರೂ ಇಸ್ಲಾಂ ಪುಟಗೋಸಿಗಳು ಇನ್ನೂ ತಲೆಯೆತ್ತಿ ನಿಲ್ಲಲಿಕ್ಕೆ ಆಗಲಿಲ್ಲ.
ಹಿಂದೂ ಒಂದು ಸಮಾಜದ ಸ್ವತ್ತಲ್ಲ. ತಂತ್ರಜ್ಞಾನದ ಗುಲಾಮರು ನಾವಾದರೆ ನಮ್ಮ ಸಾಮರ್ಥ್ಯ ಕಡಿಮೆ ಆಗುತ್ತದೆ. ತಂತ್ರಜ್ಞಾನದ ಗುಲಾಮರಾಗುವ ಬದಲಿಗೆ ಯಜಮಾನರಾಗಬೇಕು. ವಿಜ್ಞಾನ ಕಣ್ಣಿಗೆ ಕಾಣುವುದು, ಆದರೆ ಅನುಭವಕ್ಕೆ ಬರುವುದು ಜ್ಞಾನ. ಮಂತ್ರ ಹೇಳಿದರೆ ಪುಣ್ಯ ಸಿಗುತ್ತದೆ ಎಂಬುದು ಭ್ರಮೆ. ಮಂತ್ರಗಳು ಜ್ಞಾನ ಭಂಡಾರ ಎಂದು ಹೇಳಿದ್ದಾರೆ.
