ಅನಿವಾಸಿ ಕನ್ನಡಿಗರ ವಿಶೇಷ

ದೇಶದ್ರೋಹಿಗಳ ಮುಂದೆ ದೇಶಪ್ರೇಮವನ್ನು ಸಾಬೀತುಪಡಿಸಬೇಕಾಗಿರುವುದು ದೇಶದ ದುರಂತ: ಐಎಸ್ಎಫ್

ವರದಿಗಾರ-ಕುವೈಟ್:   ಸ್ವಾತಂತ್ರ್ಯ ಹೋರಾಟದ ಸುದೀರ್ಘ ಪಯಣದಲ್ಲಿ ತ್ಯಾಗ ಹಾಗೂ ಲಕ್ಷಾಂತರ ಹುತಾತ್ಮತೆಯನ್ನು ಪಡೆದ ಸಮುದಾಯವು ಬ್ರಿಟಿಷರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟದಿಂದ ದೂರ ನಿಂತ ದೇಶದ್ರೋಹಿಗಳ ಮುಂದೆ ತನ್ನ ದೇಶಪ್ರೇಮವನ್ನು ಸಾಬೀತುಪಡಿಸಬೇಕಾಗಿರುವುದು ದೇಶದ ಬಹುದೊಡ್ಡ ದುರಂತ ಎಂದು ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಲ್ಲಾವುದ್ದಿನ್ ಹಕ್ ಬಿಹಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಇಂಡಿಯನ್ ಸೋಶಿಯಲ್ ಫೋರಂ ಕುವೈಟ್ ವತಿಯಿಂದ ಇಲ್ಲಿನ ಜಾಬ್ರಿಯಾ ಬಿ.ಬಿ.ಎಸ್. ಅಲುಮ್ನಿ ಕ್ಲಬ್ ನಲ್ಲಿ ಹಮ್ಮಿಕೊಂಡ 71ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಮುಖ್ಯ ಭಾಷಣದಲ್ಲಿ ಹೇಳಿದರು. ಭಾರತೀಯರ ಆಂತರಿಕ ಕಚ್ಚಾಟವು ಯಾವ ರೀತಿ ಭಾರತೀಯರನ್ನು ಯೂರೋಪಿಯನ್ನರ ಗುಲಾಮತ್ವದ ಕಡೆಗೆ ಒಯ್ಯಿತು ಎನ್ನುವುದನ್ನು ವಿವರಿಸಿದರು. ಪ್ರಸ್ತುತ ನಮ್ಮನ್ನಾಳುತ್ತಿರುವ ಸರ್ವಾಧಿಕಾರಿ ಧೋರಣೆಯುಳ್ಳ ಸರ್ಕಾರಗಳು ಮತ್ತು ಬಂಡವಾಳಶಾಹಿ ಯೂರೋಪಿಯನ್ ಕೊಲೋನಿಯಲ್ ಶಕ್ತಿಗಳ ನಡುವಿನ ಸಾಮ್ಯತೆಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.

ಇಸ್ಲಾಂ ಪ್ರಸೆಂಟೇಶನ್ ಕಮಿಟಿ ಪ್ರಕಟಿಸಿತ್ತಿರುವ ಅಲ್ ಮಿಸ್ಬಾಹ್ ಉರ್ದು ಮ್ಯಾಗಜೀನ್ ಸಂಪಾದಕರಾದ ಸಫಾತ್ ಆಲಂ ತೈಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದರು. ತಾಯ್ನಾಡಿನಿಂದ ದೂರವಿದ್ದರೂ ಸ್ವಾತಂತ್ರೋತ್ಸವದ ಕಂಪನ್ನು ಮೆರೆಯಲು ದೊಡ್ಡ ಸಂಖ್ಯೆಯಲ್ಲಿ ಅನಿವಾಸಿಗಳನ್ನು ಒಟ್ಟುಗೂಡಿಸಿದ್ದಕ್ಕಾಗಿ ಸಂಘಟಕರನ್ನು ಅವರು ಅಭಿನಂದಿಸಿದರು.

 

 

 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಜನಾಬ್ ಖಲೀಲ್ ಅಡೂರ್, ಸ್ವಾತಂತ್ರ್ಯವೆಂಬುದು ಪ್ರತಿಯೊಂದು ಜೀವಿಯ ಜನ್ಮ ಸಿದ್ದ ಹಕ್ಕು. ಭಾರತ ಅಥವಾ ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟದ ಉದ್ದೇಶವು ಕೇವಲ ಆಡಳಿತಗಾರರನ್ನು ಬದಲಾವಣೆಗೊಳಿಸುವುದಕ್ಕಲ್ಲ ಬದಲಾಗಿ ತಾನಿಚ್ಚಿಸಿದ್ದನ್ನು ಮಾತನಾಡುವ, ತಾನಿಚ್ಚಿಸಿದಂತೆ ಬದುಕುವ, ತಾನಿಚ್ಚಿಸಿದ್ದನ್ನು ತಿನ್ನುವ ಮೂಲಭೂತ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿದೆ ಎಂದರು. ಆದರೆ ಇಂದಿನ ಧಮನಕಾರಿ ಸರಕಾರಗಳು ಜನರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿರುವುದು ಆತಂಕಕಾರಿ ಬೆಳವಣೆಗೆ ಎಂದರು.

ವೇದಿಕೆಯಲ್ಲಿ ಐಎಸ್ಎಫ್ ಕರ್ನಾಟಕ ಅಧ್ಯಕ್ಷರಾದ ಇಮ್ತಿಯಾಝ್ ಅಹ್ಮದ್ ಅರ್ಕುಳ ಉಪಸ್ಥಿತರಿದ್ದರು. ಇಂಡಿಯನ್ ಸೋಶಿಯಲ್ ಫೋರಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಮಂಚಿ  ಸ್ವಾಗತಿಸಿ, ಶಮೀರ್ ಅಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಕಂದರ್ ಭಾಷಾ ವಂದಿಸಿದರು.   ಐಕ್ಯತಾ ಗಾನ ಸಾರೆ ಜಹಾಂಸೆ ಅಚ್ಚಾ…ಹಾಡಿನ ತಾಳಕ್ಕೆ ಪುಟಾಣಿ ಮಕ್ಕಳು ತ್ರಿವರ್ಣ ಧ್ವಜಗಳನ್ನು ಸುಂದರವಾಗಿ ಬೀಸುವುದರೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕಾರ್ಯಕ್ರಮದ ಅಂತ್ಯದಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group