ರಾಜ್ಯ ಸುದ್ದಿ

ಈ ನೆಲದ ಇತಿಹಾಸವನ್ನು ಯೋಗಿ ಆದಿತ್ಯನಾಥ್ ರಿಂದ ಕಲಿಯುವ ಅಗತ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವರದಿಗಾರ (ಡಿ.23): ಈ ನೆಲದ ಇತಿಹಾಸವನ್ನು ಯೋಗಿ ಆದಿತ್ಯನಾಥ್ ಅವರಿಂದ ಕಲಿಯುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಗಾವಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ರಾಜ್ಯದ ಬಗ್ಗೆ ಮಾತನಾಡುವ ಮೊದಲು ಯೋಗಿ ಆದಿತ್ಯನಾಥ ತಮ್ಮ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಕೇವಲ ಟಿಪ್ಪು ಜಯಂತಿ ಅಲ್ಲ; ಶ್ರೀಕೃಷ್ಣನ ಜಯಂತಿ ಆರಂಭಿಸಿದ್ದೂ ನಾವೇ. ನಾನು ಈ ಮಣ್ಣಿನ ಮಗ. ಇದು ರಾಣಿ ಚನ್ನಮ್ಮ, ಅಕ್ಕಮಹಾದೇವಿ, ಬಸವಣ್ಣನ ನಾಡು. ಇಲ್ಲಿ ನಿಮ್ಮ ಜಾದೂ ನಡೆಯುವುದಿಲ್ಲ. ರಾಜ್ಯದ ಜನರು ಬುದ್ಧಿವಂತರಿದ್ದು ಯಾರನ್ನು ಬೆಂಬಲಿಸಬೇಕು, ಯಾರನ್ನು ತಿರಸ್ಕರಿಸಬೇಕು ಎಂಬುದನ್ನು ತೀರ್ಮಾನಿಸುವಷ್ಟು ಪ್ರಭುದ್ಧರಾಗಿದ್ದಾರೆ  ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಜಯಂತಿ ಜೊತೆ ಅಂಬೇಡ್ಕರ್‌, ಬಸವಣ್ಣ, ಕನಕದಾಸ, ವಾಲ್ಮೀಕಿ, ಶಿವಾಜಿ, ಹರಳಯ್ಯ, ಕೆಂಪೇಗೌಡ, ಮಹಾವೀರ, ಯೇಸು ಕ್ರಿಸ್ತ ಸೇರಿದಂತೆ ಎಲ್ಲ ಜಾತಿ– ಧರ್ಮದವರ ಒಟ್ಟು 26 ಜಯಂತಿಗಳನ್ನು ಆಚರಿಸುತ್ತಿದ್ದೇವೆ ಎಂದು ಬಿಜೆಪಿಯ ಗಮನಕ್ಕೆ ತಂದಿದ್ದಾರೆ.

ಯಡಿಯೂರಪ್ಪ ಕರೆದಾಗ ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುವ ಅಗತ್ಯ ಇಲ್ಲ. ನಾವು ಆರಂಭಿಸಿದ್ದ ಕೃಷ್ಣನ ಜಯಂತಿಯನ್ನು ಬಿಜೆಪಿ ಸರಕಾರವಿದ್ದಾಗ ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ,  ಸಮಾಜ ಸುಧಾರಕ ಬಸವಣ್ಣನ ಭಾವಚಿತ್ರವನ್ನು ಎಲ್ಲ ಸರಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಹೊರಡಿಸಿದ್ದೇನೆ. ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಿದ್ದೇನೆ. ಈ ಕೆಲಸಗಳನ್ನು ಬಿಜೆಪಿಗರು ಯಾಕೆ ಮಾಡಲಿಲ್ಲ ಎಂದು ಕೇಳಿದ್ದಾರೆ.

ಧಾರ್ಮಿಕ ಪ್ರಚೋದನೆ ಮಾಡುವ ಉದ್ದೇಶದಿಂದ ಕೋಮುವಾದಿಗಳು ಟಿಪ್ಪು ಜಯಂತಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ‘ನಾವೂ ಹಿಂದುಗಳೇ. ಇವರೊಬ್ಬರೇ ಹಿಂದೂಗಳನ್ನು ಗುತ್ತಿಗೆ ಪಡೆದಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group