ರಾಜ್ಯ ಸುದ್ದಿ

ಬಿಜೆಪಿಯವರೇ, ಮಹದಾಯಿಯನ್ನು ಮುಂದಿಟ್ಟುಕೊಂಡು ರಾಜ್ಯದ ಜನತೆಗೆ ಮೋಸ ಮಾಡುವ ಚುನಾವಣಾ ಲೆಕ್ಕಾಚಾರ ಬಿಟ್ಟುಬಿಡಿ: ಹೆಚ್ ಡಿ ಕುಮಾರಸ್ವಾಮಿ

ವರದಿಗಾರ (22.12.2017) :  ಮಹದಾಯಿ ಯೋಜನೆಯನ್ನು ನಾವು ಬಗೆಹರಿಸುತ್ತೇವೆಂದು ಚುನಾವಣಾ ಪೂರ್ವ ಹೇಳಿಕೆ ಕೊಟ್ಟುಕೊಂಡು, ಯಡಿಯೂರಪ್ಪ ಮತ್ತು ಬಿಜೆಪಿಯವರು ರಾಜ್ಯದ ಜನರನ್ನು ಮೋಸ ಮಾಡಬಾರದೆಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದೀಗ ಚುನಾವಣ ತಯಾರಿಯಲ್ಲಿರುವ ಬಿಜೆಪಿಗೆ ಇಂತಹಾ ಹೇಳಿಕೆಗಳು ಅನಿವಾರ್ಯ. ಆದರೆ ಈ ರೀತಿ ಜನರನ್ನು ಭಾವನಾತ್ಮಕವಾಗಿ ಬಳಸಿಕೊಂಡು ಚುನಾವಣಾ ಲಾಭ ಗಳಿಸುವ ಲೆಕ್ಕಾಚಾರ ಬಿಟ್ಟುಬಿಡಿ ಎಂದು ಬಿಜೆಪಿಗೆ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ತಮ್ಮ ಪರಿವರ್ತನಾ ರ‍್ಯಾಲಿಗಿಂತ ಮುಂಚೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು, ಮಹದಾಯಿ ಯೋಜನೆ ಕುರಿತಂತೆ ಯಾರೂ ಮಾಧ್ಯಮಗಳ ವರದಿ ನೋಡಬೇಡಿ,  ನಾನು ರ‍್ಯಾಲಿಯಲ್ಲಿ ಈ ಕುರಿತು ಮಾತನಾಡುತ್ತೇನೆ, ಅದನ್ನು ಕೇಳಿಕೊಳ್ಳಿ ಎಂದು ವಿನಂತಿಸಿಕೊಂಡಿದ್ದರು. ಆದರೆ ಇದೊಂದು ಪರಿವರ್ತನಾ ರ‍್ಯಾಲಿಗೆ ಜನ ಸೇರಿಸುವ ಗಿಮಿಕ್ ಎಂದು ಅಲ್ಲಿನ ರೈತರು ಕಿಡಿಕಾರಿದ್ದರು. ನಂತರ ಯಡಿಯೂರಪ್ಪನವರು ತನ್ನ ಭಾಷಣದಲ್ಲಿ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಕಳಸಾ ಬಂಡೂರಿ ನಾಲೆಗಳ ಮೂಲಕ ಕರ್ನಾಟಕಕ್ಕೆ ಕುಡಿಯುವ ನೀರು ಕೊಡಲು ತಯಾರಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಪಾರಿಕ್ಕರ್, ಗೋವಾದ ಸ್ಥಳೀಯ ‘ತರುಣ್ ಭಾರತ್’ ಎನ್ನುವ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ಗೋವಾದ ಹಿತ ಬಲಿ ಕೊಡಲು ನಾವು ಸಿದ್ಧರಿಲ್ಲ. ಗೋವಾ ಜನತೆ ಆತಂಕ ಪಡುವ  ಅಗತ್ಯವಿಲ್ಲ,  ಗೋವಾ ಹಿತ ಬಲಿ ಕೊಟ್ಟು ಸಂಧಾನ ಮಾತುಕತೆ ಮಾಡುವುದಿಲ್ಲ. ಜನರ ಹಿತ  ಕಾಪಾಡಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ಇದರಿಂದಾಗಿ ಯಡಿಯೂರಪ್ಪನವರ ರ‍್ಯಾಲಿಯಲ್ಲಿನ ಹೇಳಿಕೆ ಕೇವಲ ಚುನಾವಣಾ ಲಾಭಕ್ಕೆ ಸಂಬಂಧಿಸಿದ್ದು ಎಂಬ ರೈತರ ಹೇಳಿಕೆಗೆ ಪುಷ್ಠಿ ನೀಡಿತ್ತು.

ಇದೀಗ ಈ ಕುರಿತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಯಡಿಯೂರಪ್ಪನವರು ಮಹದಾಯಿ ಸಮಸ್ಯೆ ಬಗೆಹರಿಸಲು ಕಾರ್ಯಪ್ರವೃತ್ತರಾಗುವುದಾದರೆ ಸ್ವಾಗತ, ಆದರೆ ಇದನ್ನು ಚುನಾವಣೆಗೆ ಬಳಸಿಕೊಂಡು ಜನರಿಗೆ ಮೋಸ ಮಾಡುವ ನಾಟಕವಾಡಬಾರದು ಎಂದು ಹೇಳಿದ್ದಾರೆ. ಮಹದಾಯಿ ಸಮಸ್ಯೆಗೆ ಶಾಶ್ವತವಾದ ಪರಿಹಾರಕ್ಕೆ ಎಲ್ಲರೂ ಮುಂದಾಗಬೇಕೇ ಹೊರತು, ಕೇವಲ ಚುನಾವಣಾ ಸಮಯದಲ್ಲಿ ಮತದಾರರನ್ನು ಓಲೈಸಲು ನಾಟಕ ಮಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group