ರಾಷ್ಟ್ರೀಯ ಸುದ್ದಿ

ಬಿಜೆಪಿ ನಾಯಕರ ಗೋಶಾಲೆಯಲ್ಲಿ ಹಸಿವಿನಿಂದ ಇನ್ನೂರಕ್ಕೂ ಅಧಿಕ ಹಸುಗಳ ಸಾವು

ವರದಿಗಾರ-ಛತ್ತೀಸ್‍ಗಡ: ದುರ್ಗಾ ಜಿಲ್ಲೆಯ ರಾಜ್‍ಪುರ್ ಗ್ರಾಮದಲ್ಲಿ ಬಿಜೆಪಿ ನಾಯಕರ ಸೇರಿದ ಗೋಶಾಲೆಯಲ್ಲಿ ಹಸಿವಿಂದ ಮತ್ತು ಔಷಧಿ ದೊರೆಯದೆ ಸುಮಾರು 200ಕ್ಕೂ ಅಧಿಕ ಹಸುಗಳು ಸಾವನ್ನಪ್ಪಿದೆ. ಕಳೆದ ಮೂರು ದಿನಗಳಲ್ಲಿ 200 ಹಸುಗಳು ಸತ್ತಿದ್ದು, ಇದರಲ್ಲಿ 27 ಹಸುಗಳು ಹಸಿವಿನಿಂದ ಸಾವನ್ನಪ್ಪಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ. ಗೋಶಾಲೆಯ ಪರಿಸರದಲ್ಲೇ ಸಾವನ್ನಪ್ಪಿರುವ ಹಸುಗಳನ್ನು ಹೂಳಲಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

ಜಮುಲ್ ನಗರ್ ನಿಗಮ್‍ನ ಉಪಾಧ್ಯಕ್ಷರೂ, ಬಿಜೆಪಿ ನಾಯಕರಾಗಿರುವ ಹರೀಶ್ ವರ್ಮಾ ರವಿಗೆ ಸೇರಿದ ಗೋಶಾಲೆ ಕಳೆದ ಸುಮಾರು ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ  ಗೋಶಾಲೆ ಬಳಿ ಜೆಸಿಬಿ ತಂದು ಸಾವನ್ನಪ್ಪಿರುವ ಹಸುಗಳನ್ನು ಹೂಳುವುದಕ್ಕಾಗಿ ಹೊಂಡ ತೋಡುವುದನ್ನು ನಾವು ಗಮನಿಸಿದ ಬಳಿಕ ಮಾಧ್ಯಮಗಳಿಗೆ ತಿಳಿಸಿದೆ ಮತ್ತು ಕೆಲವೊಂದು ಹಸುಗಳು ಅಲ್ಲಿ ಸತ್ತು ಬಿದ್ದಿರುವುದನ್ನು ಕಂಡಿದ್ದೇವೆ ಎಂದು ರಾಜ್‍ಪುರ್ ಸರ್‍‍ಪಂಚ್‍ರ ಪತಿ ಸೇವಾ ರಾಮ್ ಸಾಹು ಹೇಳಿದ್ದಾರೆ.

ಹಸುಗಳು ಹೊಟ್ಟೆಗೆ ಆಹಾರ ಮತ್ತು ಔಷಧಿ ಲಭಿಸದೆ ಸಾವಿಗೀಡಾಗಿವೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರು ಹೇಳಿಕೆ ನೀಡಿಯೂ ಎರಡು ದಿನಗಳ ಹಿಂದೆ ಗೋಶಾಲೆಯ ಗೋಡೆ ಕುಸಿದು ಬಿದ್ದಿದ್ದು, ಅದರಿಂದ ಹಸುಗಳು ಸಾವಿಗೀಡಾಗಿವೆ ಎಂದು ಹರೀಶ್ ವರ್ಮಾ ಪ್ರಕರಣವನ್ನು ತಿರುಚಲು ವಾದಿಸುತ್ತಿದ್ದಾರೆ. ಹಸುಗಳಿಗೆ ಹುಲ್ಲು ಸಿಗದೆ ಅವುಗಳು ಸತ್ತಿವೆ. ಕಳೆದ ಎರಡು ದಿನಗಳಲ್ಲಿ 27 ಹಸುಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ದುರ್ಗ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಎಂಕೆ ಚಾವ್ಲಾ ಹೇಳಿದ್ದಾರೆ.

ವೈದ್ಯರು ಮಾತನಾಡುತ್ತಾ,  ಗೋಶಾಲೆಯಲ್ಲಿರುವ 50 ಹಸುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದಿದ್ದಾರೆ ವೈದ್ಯರು. ಒಟ್ಟು ಎಷ್ಟು ಹಸುಗಳು ಸಾವಿಗೀಡಾಗಿವೆ ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಉಪ ವಿಭಾಗೀಯ ಮೆಜಿಸ್ಟ್ರೇಟ್ ರಾಜೇಶ್ ರಾಟ್ರೆ ಹೇಳಿದ್ದಾರೆ. ಕಳೆದ ಎರಡು ವರ್ಷದಿಂದ ಗೋಶಾಲೆಯ ದುರಸ್ಥಿಗಾಗಿ ಸರ್ಕಾರದ ಮೊರೆ ಹೋಗಿದ್ದರೂ ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ ಅಂತಾರೆ ವರ್ಮಾ.

ನನ್ನ ಗೋಶಾಲೆಯಲ್ಲಿ ಹಸುಗಳ ಸಂಖ್ಯೆ ಜಾಸ್ತಿಯಾಗಿದೆ. 220 ಹಸುಗಳನ್ನು ಮಾತ್ರ ಸಾಕುವ ಜಾಗದಲ್ಲಿ 650 ಹಸುಗಳನ್ನು ಸಾಕುತ್ತಿದ್ದೇವೆ. ಹಸುಗಳಿಗೆ ಕೊಡಲು ಆಹಾರವಿಲ್ಲ. ಸಹಾಯ ಮಾಡಿ ಎಂದು ನಾನು ಸರ್ಕಾರವನ್ನು ಬೇಡಿದರೂ ಪ್ರಯೋಜನವಾಗಲಿಲ್ಲ. ಗೋಶಾಲೆಗೆ 10 ಲಕ್ಷಕ್ಕಿಂತಲೂ ಹೆಚ್ಚು ಹಣ ಸಿಗಬೇಕಾಗಿದ್ದರೂ ಇನ್ನೂ ಏನೂ ಸಿಕ್ಕಿಲ್ಲ. ಹಸುಗಳ ಸಾವಿಗೆ ನನ್ನನ್ನು ದೂರುವುದು ಸರಿಯಲ್ಲ ಎಂದು ವರ್ಮಾ ಹೇಳಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು,   ವರ್ಮ ವಿರುದ್ಧ ಅಧಿಕೃತ ದೂರು ಸಿಕ್ಕಿದರೆ ಮಾತ್ರ ಅವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group