ರಾಜ್ಯ ಸುದ್ದಿ

ಭೂಮಿ ಮತ್ತು ವಸತಿ ಹಕ್ಕು ಸಮಸ್ಯೆ: ನಾಲ್ಕನೇ ಹಂತದ ಹೋರಾಟಕ್ಕೆ ಬೆಂಬಲ ಸೂಚಿಸಿದ ಎಸ್.ಡಿ.ಪಿ.ಐ

ವರದಿಗಾರ-ಬೆಂಗಳೂರು: ರಾಜ್ಯದಾದ್ಯಂತ ತಾಂಡವಾಡುತ್ತಿರುವ ಬಡವರ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕಳೆದ ಒಂದು ವರ್ಷದಿಂದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಮೂರು ಹಂತಗಳ ಚಳುವಳಿಯನ್ನು ನಡೆಸಿದ್ದು, ನಾಲ್ಕನೇ ಹಂತದ ಹೋರಾಟವನ್ನು ಆಗಸ್ಟ್ 21ರಂದು ಆರಂಬಿಸಲಿದೆ. ಈ ಹೋರಾಟಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬೆಂಬಲ ಸೂಚಿಸಿತು.

ಭೂ ನ್ಯಾಯ ಮಂಡಳಿ ಮತ್ತು ಮಂಜೂರಾತಿ ಸಮಿತಿಯ ಶವಯಾತ್ರೆ ಮತ್ತು ಪ್ರತಿಕೃತಿ ದಹಿಸುವ ಮೂಲಕ ಆರಂಭಗೊಳ್ಳಲಿರುವ ಹೋರಾಟ ಬಳಿಕ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದೆ.

ಆ ಪ್ರಯುಕ್ತ ಆಗಸ್ಟ್ 21ರಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆ ಸ್ವಾಮಿಯವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ದಲಿತ-ದಮನಿತರ ಯುವ ನೇತಾರ ಜಿಗ್ನೇಷ್ ಮೇವಾನಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ. ಹೋರಾಟ ಸಮಿತಿಯ 3ಹಂತದ ಹೋರಾಟಗಳಿಗೂ ಎಸ್.ಡಿ.ಪಿ.ಐ ಪಕ್ಷವು ಬೆಂಬಲವನ್ನು ನೀಡಿದ್ದು, ಇನ್ನು ನಡೆಯಲಿರುವ ನಾಲ್ಕನೇ ಹಂತದ ಹೋರಾಟಕ್ಕೂ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಸಮಿತಿಯು ಬೆಂಬಲವನ್ನು ಸೂಚಿಸಿದೆ.
 ಮುಂದಿನ ಎಲ್ಲಾ ಹೋರಾಟಗಳಲ್ಲೂ ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಭಾಗವಹಿಸುವಂತೆ ಈ ಮೂಲಕ ಕರೆ ನೀಡಿದ್ದಾರೆ. ಆಗಸ್ಟ್ 21ರಂದು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಬೆಂಗಳೂರಿನ ಪುರಭವನದಿಂದ ಸಮಾವೇಶದ ಜಾಥಾ ಹೊರಡಲಿದ್ದು 11.30ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದ್ದಾರೆ. 
 
ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಹೋರಾಟ ಸಮಿತಿಯ ಸಂಚಾಲಕರಾದ ಸಿರಿಮನೆ ನಾಗರಾಜ್, , ಜನ ಶಕ್ತಿ ಸಂಘಟನೆಯ ಗೌರಿ, ಕಾರ್ಮಿಕ ಸಂಘಟನೆಯ ಗಾಯತ್ರಿ, ಟ್ರೇಡ್ ಯೂನಿಯನ್‍ನ ಸೆಬೆಸ್ಟಿಯನ್ ದೇವರಾಜ್, ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮರಿಯಪ್ಪ ಮತ್ತು ವೆಲ್ಫೇರ್ ಪಾರ್ಟಿಯ ರಿಯಾಝ್‍ ಉಪಸ್ಥಿತರಿದ್ದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group