ವರದಿಗಾರ (ಡಿ.19): ಗುಜರಾತಿನಲ್ಲಿ ಬಿಜೆಪಿ ಸತತ ಆರನೇ ಬಾರಿಗೆ ಆಡಳಿತವನ್ನು ನಡೆಸಲು ಯಶಸ್ವಿಯಾಗಿದ್ದರೂ, ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐವರು ಸಚಿವರು ಸೋಲನ್ನು ಅನುಭವಿಸಿದ್ದು, ಮುಖಭಂಗಕ್ಕೀಡಾಗಿದ್ದಾರೆ.
ಕಳೆದ ರೂಪಾನಿ ಸರಕಾರದ ಅವಧಿಯಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ, ಗಧಾಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆತ್ಮರಾಮ ಪರಮಾರ್ ರವರು ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಬಾಯಿ ಮಾರು ವಿರುದ್ಧ ಸೋಲನ್ನಪ್ಪಿದ್ದಾರೆ. ಜಮೋಧಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಮಣಬಾಯಿ ಸಪರಿಯಾ ರವರು ಕಾಂಗ್ರೆಸ್ ಅಭ್ಯರ್ಥಿ ಚಿರಾಗಬಾಯಿ ಕಲರಿಯಾ ವಿರುದ್ಧ ಸೋಲನ್ನಪ್ಪಿದ್ಧಾರೆ.
ಉಳಿದ ಮೂವರು, ವಾವ್ ಕ್ಷೇತ್ರದಲ್ಲಿ ಶಂಕರ ಚೌಧರಿ, ದೇವದರ ಕ್ಷೇತ್ರದಲ್ಲಿ ಕೇಶಾಜಿ ಚೌಹಾಣ್, ನಾಂದೋಡ್ ಕ್ಷೇತ್ರದಲ್ಲಿ ಶಬ್ದಶರಣ್ ತಾಡ್ವಿ ಸೋಲನ್ನಪ್ಪಿದ್ದಾರೆ.
