ವರದಿಗಾರ (18.12.2017) : ಜನರ ಧ್ವನಿಯಾಗಿ ವಿಧಾನಸೌಧ ಪ್ರವೇಶಿಸಿದ ಜಿಗ್ನೇಶ್ ಮೇವಾನಿಯವರಿಗೆ ಅಭಿನಂದನೆಗಳು. ಜಿಗ್ನೇಶ್ ಮೇವಾನಿಯ ಗೆಲುವು ಅವರ ತಳಮಟ್ಟದ ಹೋರಾಟಕ್ಕೆ ಸಂದ ಜಯವಾಗಿದೆ. ಶೋಷಿತರ, ದಮನಿತರ, ಅಲ್ಪಸಂಖ್ಯಾತರ, ದಲಿತ ಹಾಗೂ ಹಿಂದುಳಿದ ವರ್ಗಗಳ ಧ್ವನಿ ಇನ್ನು ಗುಜರಾತ್ ವಿಧಾನಸೌಧದಲ್ಲಿ ಮೊಳಗಲಿದೆ. ಇದು ನಮ್ಮೆಲ್ಲರಿಗೂ ಸಂತೋಷಪಡುವ ವಿಷಯವಾಗಿದೆ. ಅನ್ಯಾಯವನ್ನು ಮೆಟ್ಟಿ ನಿಂತು ಚಳುವಳಿಗಳ ಮೂಲಕ ಮುಖ್ಯವಾಹಿನಿಯಲ್ಲಿ ಹೋರಾಟಗಳ ಮೂಲಕ ಜನಬೆಂಬಲ ಪಡೆದು ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿಯೇ ಅನ್ಯಾಯಗಳನ್ನು ಎದುರಿಸಲು ಜಿಗ್ನೇಶ್ ಮೇವಾನಿ ತಯಾರಾಗಿದ್ದಾರೆ. ಇದು ಉಳಿದ ಎಲ್ಲಾ ಫ್ಯಾಶಿಸ್ಟ್ ವಿರೋಧಿ ಹೋರಾಟಗಳಿಗೆ ಸ್ಪೂರ್ತಿ ಕೊಡುವಂತಹಾ ವಿಚಾರವಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಜೆದ್ದಾ ಘಟಕ ತಿಳಿಸಿದೆ.
ಜಾತ್ಯಾತೀತ ವ್ಯವಸ್ಥೆಯನ್ನು ಬಲಗೊಳಿಸಲು ಬೆಂಬಲವು ಅನಿವಾರ್ಯವೆಂದುಕೊಂಡು ಹಾಗೂ ಜಿಗ್ನೇಶ್ ರವರ ಗೆಲುವಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಬೆನ್ನೆಲುಬಾಗಿ ನಿಂತ ಕರ್ನಾಟಕ ಕೇರಳ ತಮಿಳುನಾಡು ಎಸ್.ಡಿ.ಪಿ.ಐ ನಾಯಕರು ಹಾಗೂ ಕಾರ್ಯಕರ್ತರಿಗೂ ಕೃತಜ್ಞತೆಗಳು ಸಲ್ಲಿಸುತ್ತಿದ್ದೇವೆಂದು ಇಂಡಿಯನ್ ಸೋಶಿಯಲ್ ಫೋರಮ್ ತಿಳಿಸಿದೆ
ವರದಿ : ಮುಹಮ್ಮದ್ ರಫಿ ಮಠ
