► ತನಿಖೆಗಿಂತ ಮೊದಲೇ ಶೋಭಾರಿಂದ ಮುಸ್ಲಿಮರ ವಿರುದ್ಧ ಆರೋಪ !
► ಸುಳ್ಳು ಸುದ್ದಿಗಳ ಮೂಲಕ ಗಲಭೆಗೆ ಪ್ರಚೋದನೆ !
ವರದಿಗಾರ (18.12.2017) : ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಎನ್ನುವ ಯುವಕನ ಸಾವನ್ನು ಕೊಲೆಯೆಂದು ಬಿಂಬಿಸಿ, ಆ ಮೂಲಕ ಗಲಭೆ ನಡೆಸಿದ್ದ ಬಿಜೆಪಿ, ತದ ನಂತರ ಗಲಭೆಯ ಕಿಚ್ಚು ಆರುವ ಹೊತ್ತಲ್ಲೇ ಡಿಸೆಂಬರ್ 14 ರಂದು “ಶಾಲಾ ಬಾಲಕಿಗೆ ಚೂರಿ ಇರಿತ” ಎಂಬ ಮತ್ತೊಂದು ಸುಳ್ಳು ಸುದ್ದಿಯ ಗುಲ್ಲೆಬ್ಬಿಸಿ ಗಲಭೆಗೆ ಮರುಜೀವ ನೀಡಿದ್ದರು. ಶಾಲಾ ಬಾಲಕಿಯೋರ್ವಳಿಗೆ ಮುಸ್ಲಿಮರು ಚೂರಿ ಇರಿದಿದ್ದಾರೆಂದು ಹರಡಿದ ಸುಳ್ಳು ಸುದ್ದಿಗೆ ಹಲವು ಮನೆಗಳ ಮೇಲೆ ಕಲ್ಲು ತೂರಾಟವಾಗಿ, ಅಂಗಡಿ ಮುಂಗಟ್ಟುಗಳು ದಾಳಿಗೊಳಪಟ್ಟು ಹಾಗೂ ಮಸೀದಿಯೊಂದರ ಸೊತ್ತುಗಳು ಬೆಂಕಿಗಾಹುತಿಯಾಗಿದ್ದವು. ಘಟನೆಯ ಪೂರ್ವಾಪರ ತಿಳಿಯದೆ ಕೇವಲ ಮುಸ್ಲಿಮರ ಮೇಲೆ ಸುಳ್ಳಾರೋಪ ಹೊರಿಸಿ ಗಲಭೆಯ ಕಿಚ್ಚನ್ನು ಆರದೆ ಇರುವಂತೆ ನೋಡಿಕೊಳ್ಳಲು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಪ್ರಯತ್ನಿಸಿದ್ದು, ಟ್ವಿಟ್ಟರಿನಲ್ಲಿ ಅವರು ಹಾಕಿದ ಟ್ವೀಟ್ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಾಲಾ ಬಾಲಕಿಗೆ ಚೂರಿ ಇರಿತ ಪ್ರಕರಣವನ್ನು ಹೊನ್ನಾವರ ಪೊಲೀಸರು ಭೇದಿಸಿದ್ದು, ಅದು ಗಣೇಶ್ ನಾಯ್ಕ್ ಎನ್ನುವ ಯುವಕನ ಪೀಡನೆಗೆ ಹೆದರಿ ಬಾಲಕಿ ತನ್ನ ಕೈಗೆ ಮುಳ್ಳುಗಳಿಂದ ಇರಿದು ಗಾಯಗೊಳಿಸಿದ್ದೆಂದು ನಂತರ ಬಾಯಿ ಬಿಟ್ಟಿದ್ದಳು. ಆದರೆ ಘಟನೆಯ ಸತ್ಯ ಮತ್ತು ವಾಸ್ತವಗಳು ಶೋಭಾ ಕರಂದ್ಲಾಜೆಗೆ ಬೇಡವಾಗಿ, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುವುದಕ್ಕಿಂತ ಮುಂಚೆನೇ, ಅದನ್ನು ಮುಸ್ಲಿಮರು ಮಾಡಿದ್ದೆಂದು ಪ್ರಚೋದನಕಾರಿಯಾಗಿ ಟ್ವೀಟ್ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.
ಶೋಭಾ ಕರಂದ್ಲಾಜೆ ತನ್ನ ಪ್ರಚೋದನಕಾರಿ ಭಾಷಣ, ಹೇಳಿಕೆ ಮತ್ತು ಟ್ವೀಟ್’ಗಳಿಗೆ ಮಾತ್ರವೇ ಪ್ರಸಿದ್ಧಿ ಪಡೆದವರು. ಹೊನ್ನಾವರದ ಘಟನೆಯನ್ನು ಪ್ರಸ್ತಾಪಿಸುತ್ತಾ, ‘ಜಿಹಾದಿಗಳಿಂದ ಶಾಲಾ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಯತ್ನ ನಡೆದಿದೆ, ಸರಕಾರ ಮೌನವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯರ ಓಲೈಕೆಯ ರಾಜಕಾರಣದಿಂದಾಗಿ ಕರ್ನಾಟಕ ಜಿಹಾದಿಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಆದರೆ ಅವರು ಮಾತ್ರ ತನ್ನ ಓಲೈಕೆಯ ಮತ್ತು ಒಡೆದಾಳುವ ತಂತ್ರದಲ್ಲಿ ಮುಂದಿವರಿದಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲಿದ್ದೀರಿ ?’ ಎಂದು ತನ್ನ ಸರಣಿ ಟ್ವೀಟ್ ಗಳ ಮೂಲಕ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದರು.
ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬಂದಿದ್ದರೂ, ಶೋಭಾ ಮಾತ್ರ ತನ್ನ ಟ್ವೀಟನ್ನು ಇನ್ನೂ ಅಳಿಸದೆ ಕಾಯ್ದುಕೊಂಡಿದ್ದಾರೆ.
Jihadis tried to rape and murder a girl studying in 9th std near honnavar.Why is the govt silent about this incident?Arrest those who molested and injured this girl. Where are you CM @siddaramaiah?
— Shobha Karandlaje (@ShobhaBJP) December 14, 2017
CM @siddaramaiah's appeasement politics has turned Karnataka into a safe haven for Jihadi Goons.He is shamelessly pursuing his agenda of appeasement & dividing the society.
— Shobha Karandlaje (@ShobhaBJP) December 14, 2017
