ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಐ ಎಸ್ ಐ ನಿಂದ ಭಾರತದ ರಾಜತಾಂತ್ರಿಕ ಅಧಿಕಾರಿಗಳ ‘ಹನಿ ಟ್ರ್ಯಾಪ್’ಗೆ ವಿಫಲ ಯತ್ನ !

ವರದಿಗಾರ (17.12.2017) : ಭಾರತದ ಹೈ ಕಮಿಷನ್ ನ ಮೂವರು ಅಧಿಕಾರಿಗಳನ್ನು ‘ಹನಿ ಟ್ರ್ಯಾಪ್’ಗೊಳಪಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆಯುವ ಮತ್ತು ರಹಸ್ಯ ರಕ್ಷಣಾ ದಾಖಲೆಗಳನ್ನು ಪಡೆಯುವ ಪಾಕಿಸ್ತಾನದ ತಂತ್ರವು ವಿಫಲಗೊಂಡಿದೆ. ಈ ಅಧಿಕಾರಿಗಳ ಹೆಸರನ್ನು ರಾಯಭಾರ ಕಛೇರಿಯು ತಿಳಿಸಿಲ್ಲವಾದರೂ, ಕಳೆದ ವಾರವೇ ಅವರನ್ನು ಭಾರತಕ್ಕೆ ಮರಳಿ ಕರೆಸಲಾಗಿದೆ. ಆದರೆ ಭಾರತದ ಯಾವುದೇ ರಹಸ್ಯಗಳು ಸೋರಿಕೆಯಾಗಿಲ್ಲವಾದರೂ, ಮುನ್ನೆಚ್ಚರಿಕೆಯ ಭಾಗವಾಗಿ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಅದೃಷ್ಟವಶಾತ್, ಭಾರತದ ಯಾವುದೇ ರಹಸ್ಯ ದಾಖಲೆಗಳು ಐ ಎಸ್ ಐ ಗೆ ಸೇರುವ ಮುಂಚೆಯೇ ಈ ಮೂವರು ಅಧಿಕಾರಿಗಳು  ಪಾಕಿಸ್ತಾನದ ಒಳ ಸಂಚಿನಲ್ಲಿರುವ ಕುರಿತು ಭಾರತದ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು, ಕೂಡಲೇ ಅವರನ್ನು ಭಾರತಕ್ಕೆ ಕರೆಯಿಸಲಾಗಿದೆ. ಈ ಮೂವರು ಅಧಿಕಾರಿಗಳು ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನ್ ಕಛೇರಿಯಲ್ಲಿ ಭಾಷಾ ಅನುವಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮರಳಿ ಈ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವುದು ಸಂಶಯವೆನ್ನಲಾಗಿದೆ.

ಇತ್ತೀಚೆಗೆ ಹಲವು ಬಾರಿ ಪಾಕಿಸ್ತಾನದಲ್ಲಿರುವ ಭಾರತದ ಕಿರಿಯ ಅಧಿಕಾರಿಗಳಿಗೆ ಈ ರೀತಿಯ ಆಮಿಷವೊಡ್ಡಿ ಭಾರತದ ರಹಸ್ಯ ದಾಖಲೆಗಳನ್ನು ಪಡೆಯಲು ಪಾಕಿಸ್ತಾನ ಪ್ರಯತ್ನಿಸಿತ್ತೆನ್ನಲಾಗಿದೆ. ಮಾಯಾಂಗನೆಯರನ್ನು ಬಳಸಿಕೊಂಡು ಗೂಢಾಚಾರ ಸಂಸ್ಥೆಗಳು ತಮ್ಮ ದೇಶಗಳಿಗೆ ಬೇಕಾಗಿ ತಮ್ಮ ಶತ್ರು ದೇಶಗಳ ರಹಸ್ಯ ಮಾಹಿತಿಗಳನ್ನು ಪಡೆಯುವುದು ಸಾಮಾನ್ಯವಾಗಿದ್ದರೂ, ಭಾರತ ಮತ್ತು ಪಾಕಿಸ್ತಾನದ ವಿಷಯದಲ್ಲಿ ತೀರಾ ಇತ್ತೀಚೆಗಿನ ವರೆಗೂ ಇದು ಬಹಳ ಅಪರೂಪವಾಗಿತ್ತು. ಸುಂದರ ಸ್ತ್ರೀಯರನ್ನು ಬಳಸಿಕೊಂಡು ಅಧಿಕಾರಿಗಳನ್ನು ಹೋಟೆಲ್ ರೂಮುಗಳಿಗೆ ಕರೆಸಿಕೊಂಡು, ನಂತರ ಅವರೊಂದಿಗಿರುವ ಏಕಾಂತದ ದೃಶ್ಯಗಳನ್ನು ರಹಸ್ಯ ಕ್ಯಾಮರಾಗಳ ಮೂಲಕ ಚಿತ್ರೀಕರಿಸಿ, ಆ ವೀಡೀಯೋವನ್ನು ಬಳಸಿಕೊಂಡು ಅವರಿಂದ ಭಾರತದ ರಹಸ್ಯ ದಾಖಲೆಗಳನ್ನು ಪಡೆಯುವುದು ಇದರ ಉದ್ದೇಶವಾಗಿತ್ತೆನ್ನಲಾಗಿದೆ. ಆದರೆ ಸೂಕ್ತ ಸಮಯದಲ್ಲಿ ಇದು ವಿಫಲಗೊಂಡಿದ್ದು, ಭಾರತ ನಿಟ್ಟುಸಿರು ಬಿಡುವಂತಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group