ರಾಷ್ಟ್ರೀಯ ಸುದ್ದಿ

ಮಗಳನ್ನು ಶೂಟ್ ಮಾಡಿ, ಜೀವಂತ ಸುಟ್ಟು ಕೊಂದ ತಂದೆ : ರಾಜಸ್ಥಾನದಲ್ಲಿ ಮರ್ಯಾದಾ ಹತ್ಯೆ !

ವರದಿಗಾರ (17.12.2017) : ಇತ್ತೀಚೆಗೆ ತಾನೇ ಲವ್ ಜಿಹಾದ್ ಆರೋಪ ಹೊರಿಸಿ 50 ವರ್ಷದ ಅಫ್ರಾಝುಲ್ ಎಂಬ ವ್ಯಕ್ತಿಯನ್ನು ಹೊಡೆದು ನಂತರ ಜೀವಂತ ದಹಿಸಿ ಕೊಂದ ಘಟನೆ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ, ರಾಜಸ್ಥಾನದಲ್ಲಿ ಇನ್ನೊಂದು ಅಮಾನವೀಯ ಘಟನೆ ನಡೆದಿದೆ. ಪ್ರೇಮಿಸಿದ ಕಾರಣಕ್ಕಾಗಿ ತನ್ನ 17 ಹರೆಯದ ತನ್ನ ಮಗಳನ್ನೇ ‘ಮರ್ಯಾದಾ ಹತ್ಯೆ’ ನಡೆಸಿರುವ ತಂದೆ ಈಗ ಕಂಬಿ ಎಣಿಸುತ್ತಿದ್ದಾನೆ.

ಬನ್ನೇ ಸಿಂಗ್ ಎಂಬವನೇ ಈ ಅಮಾನವೀಯ ಕೃತ್ಯ ನಡೆಸಿದ ಪಾತಕಿ ತಂದೆಯಾಗಿದ್ದು, ಮೊದಲಿಗೆ ತನ್ನ ಮಗಳನ್ನು ಅತಿ ಸಮೀಪದಿಂದ ಶೂಟ್ ಮಾಡಿದ್ದು, ಆಗ ಸಾಯದಿದ್ದ ಮಗಳನ್ನು ತನ್ನ ಕುಟುಂಬದ ಸದಸ್ಯರ ಸಹಾಯದಿಂದ ಬೆಂಕಿ ಹಚ್ಚಿ ಕೊಂದು ಹಾಕಿದ್ದಾನೆ.

ಮಗಳು ಕಳೆದ ಮೂರು ವರ್ಷಗಳಿಂದ ಯುವಕನೊಬ್ಬನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದೇ ಈ ಕೃತ್ಯ ನಡೆಸಲು ಕಾರಣವೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕುಟುಂಬದವರೆಲ್ಲರೂ ಇವರಿಬ್ಬರ ಪ್ರೀತಿಯನ್ನು ವಿರೋಧಿಸುತ್ತಿದ್ದರು. ಮಗಳನ್ನು ಶಾಲೆಯಿಂದ ಬಿಡಿಸಿ, ಪಕ್ಕದ ಊರಿನ ಇನ್ನೊಂದು ಶಾಲೆಗೆ ಸೇರಿಸಿದ್ದರು. ಆದರೂ ಹುಡುಗಿ ತನ್ನ ಪ್ರೀತಿಯನ್ನು ಮುಂದುವರಿಸಿದ್ದಳು.  ಇದರಿಂದ ಕುಪಿತಗೊಂಡಿದ್ದ ಬನ್ನೇ ಸಿಂಗ್, ತನ್ನ ತಮ್ಮ ಮತ್ತು ಪತ್ನಿಯ ಸಹಾಯದಿಂದ ಆಕೆಯನ್ನು ಶೂಟ್ ಮಾಡಿ ನಂತರ ಬೆಂಕಿ ಹಚ್ಚಿ ಕೊಂದಿದ್ದಾನೆ. ಘಟನೆಯನ್ನು ಮರೆ ಮಾಚುವಲ್ಲಿ ಸಹಕರಿಸಿದ್ದ ಹುಡುಗಿಯ ಚಿಕ್ಕಮ್ಮ, ಹತ್ಯೆಯ ಕುರಿತು ಬಾಯಿ ಬಿಟ್ಟ ನಂತರ ಘಟನೆ ಬೆಳಕಿಗೆ ಬಂತೆನ್ನಲಾಗಿದೆ. ಬನ್ನೇ ಸಿಂಗ್ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ತಮ್ಮನನ್ನೂ ಕೊಲೆ ಮತ್ತು ಸಾಕ್ಷಿ ನಾಶದ ಆರೋಪದಲ್ಲಿ ಬಂಧಿಸಲಾಗಿದೆ

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group