ರಾಜ್ಯ ಸುದ್ದಿ

ಅನಂತ್ ಕುಮಾರ್ ಹೆಗಡೆಯ ಖಾತೆ ಬದಲಿಸಿ, ‘ವಿಷ ಬೀಜ ಬಿತ್ತುವ, ಸಾಮರಸ್ಯ ಕೆಡಿಸುವ ಸಚಿವ’ ಹುದ್ದೆ ನೀಡಲಿ: ಗೃಹ ಸಚಿವ ರಾಮಲಿಂಗಾ ರೆಡ್ಡಿ

ವರದಿಗಾರ (ಡಿ.16):  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ನೀಡಿರುವ ಖಾತೆಯನ್ನು ಬದಲಿಸಿ, ವಿಷ ಬೀಜ ಬಿತ್ತುವ ಸಚಿವ, ಸಾಮರಸ್ಯ ಕೆಡಿಸುವ ಮಂತ್ರಿ ಎಂಬ ಹುದ್ದೆ ಕೊಡಲಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಲು ಅನಂತಕುಮಾರ್‌ ಹೆಗಡೆ ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದಾದರೂ ಹೆಣ ಬಿದ್ದಿದ್ದರೆ ರಣಹದ್ದುಗಳು ಕಾಯುತ್ತಿರುತ್ತವೆ. ಬಿಜೆಪಿಯ ಕೆಲವು ನಾಯಕರು ರಣಹದ್ದುಗಳಂತೆ ಕಾಯುತ್ತಿರುತ್ತಾರೆ. ಮೊದಲು ನೀವು ಮನುಷ್ಯರಾಗಿ ಸಹಬಾಳ್ವೆಯಿಂದ ಬದುಕಲು ಕಲಿಯಿರಿ. ನಿಮ್ಮಂತೆ ಒಡೆದು ಆಳುವ ನೀತಿ ನಮ್ಮದಲ್ಲ. ದೇಹದಲ್ಲೆಲ್ಲ ವಿಷ ತುಂಬಿಕೊಂಡು ಜನರಿಗೆ ತೊಂದರೆ ಕೊಡುವ ನಿಮ್ಮ ಮನಸ್ಥಿತಿ ಜನರಿಗೆ ಗೊತ್ತಿದೆ. ಜನರಿಗೆ ತೊಂದರೆ ಕೊಟ್ಟು, ಸಾವಿನಲ್ಲಿ ರಾಜಕೀಯ ಮಾಡುವ ನಿಮಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

 

ಸಮಾಜದ ಶಾಂತಿ ಕದಡಿ ಸಮಾದಲ್ಲಿ ನಿರಂತರವಾಗಿ ಭೀತಿಯನ್ನುಂಟು ಮಾಡುವವರು ಯಾವುದೇ ಧರ್ಮಕ್ಕೆ ಸೇರಿದವರಾದರೂ ಅವರು ಭಯೋತ್ಪಾದಕರು ಎಂದು ಹೇಳಿದ್ದಾರೆ.

ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಸರ್ಕಾರ ಪ್ರಾಮಾಣಿಕವಾಗಿ ಸಿಬಿಐಗೆ ವಹಿಸಿದೆ. ರಾಜ್ಯದ ಜನರಿಗೆ ರಕ್ಷಣೆ ಕೊಡುವ ಕರ್ತವ್ಯವನ್ನು ಸರಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಫೇಸ್‌ ಬುಕ್‌ನಲ್ಲಿ  ಅನಂತಕುಮಾರ್ ಹೆಗಡೆ ಬರೆದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ರೆಡ್ಡಿ, ‘ಮುಂದಿದೆ ಮಾರಿಹಬ್ಬ ಅಂದ್ರೆ ಏನು. ನಿಮ್ಮನ್ನು ಮಂತ್ರಿ ಮಾಡಿ ಕಳಿಸಿರುವುದು ಯಾಕೆ. ಮಾರಿ ಹಬ್ಬ ಅಂದರೆ ರಾಜ್ಯದಲ್ಲಿ ಇನ್ನಷ್ಟು ಗಲಾಟೆ ಎಬ್ಬಿಸುವುದಾ? ಪೊಲೀಸರೇನು ಕೈಕಟ್ಟಿ ಕುಳಿತುಕೊಂಡಿದ್ದಾರಾ’ ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group