ವರದಿಗಾರ-ಜಿದ್ದಾ (ಡಿ.16): ಜೋಕಟ್ಟೇ ಏರಿಯಾ ಮುಸ್ಲಿಮ್ ವೆಲ್ಫೇರ್ ಅಸೋಶಿಯೇಷನ್ (JAMWA) ಇದರ ಜಿದ್ದಾ ಘಟಕದ ವಾರ್ಷಿಕ ಮಹಾಸಭೆಯು ಇಲ್ಲಿನ ರಿಹಾಬ್ ನಲ್ಲಿರುವ ದಾವತ್ ರೆಸ್ಟೋರೆಂಟ್ ನಲ್ಲಿ 2017-18 ರ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದು, ಅಧ್ಯಕ್ಷರಾಗಿ ರವೂಫ್ AKF ಅವಿರೋಧವಾಗಿ ಪುನರಾಯ್ಕೆಯಾದರು.
ಕಾರ್ಯದರ್ಶಿಯಾಗಿ ರವೂಫ್ NM ಮತ್ತು ಜೊತೆ ಕಾರ್ಯದರ್ಶಿಯಾಗಿ ಅಸ್ತರ್ ಆಯ್ಕೆಯಾದರು.
ಅಸ್ತರ್ ರವರ ಕಿರಾತ್ ಪಠಣದೊಂದಿಗೆ ಸಭೆ ಆರಂಭವಾಯಿತು. ಸ್ವಾಗತ ಭಾಷಣ ಮಾಡಿದ ಅಧ್ಯಕ್ಷ ರವೂಫ್ AKF, ಕಳೆದ ಒಂದು ವರ್ಷದಲ್ಲಿ ಸದಸ್ಯರು ನೀಡಿದ ಸತತ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ದೇವ ಭಯ ಮತ್ತು ಉತ್ತಮ ಜ್ಞಾನ ಸಂಪಾದನೆಯ ಪ್ರಾಮುಖ್ಯತೆಯ ಬಗ್ಗೆ ಪವಿತ್ರ ಕುರಾನಿನ ಆಧಾರದಲ್ಲಿ ಅಬ್ದುಲ್ ರಹ್ಮಾನ್ ಅಹಮದ್ ರವರು ವಿವರಿಸಿದರು. ಜೊತೆ ಕಾರ್ಯದರ್ಶಿ ರವೂಫ್ NM ವಾರ್ಷಿಕ ವರದಿ ಮಂಡಿಸಿದರು.
ಬೀಳ್ಕೊಡುಗೆ:
ಕಳೆದ 28 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಊರಿಗೆ ಮರಳುವ ಸಿದ್ಧತೆಯಲ್ಲಿರುವ ಸದಸ್ಯ ಅಬ್ದುಲ್ ರಹ್ಮಾನ್ ಅಹಮದ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿದ ಅಬ್ದುಲ್ ರಹ್ಮಾನ್ ಇವರು ಸಮಿತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಸದಸ್ಯರ ನಿಸ್ವಾರ್ಥ ಸೇವೆಗೆ ಉತ್ತಮ ಪ್ರತಿಫಲ ನೀಡಲಿ ಪ್ರಾರ್ಥಿಸಿದರು.
ಸಭೆಯಲ್ಲಿ ಅಬ್ದುಲ್ ರಹ್ಮಾನ್, ಹನೀಫ್ ಹಾರಿಸ್, ರವೂಫ್ AKF, ಝಮೀರ್ (ಜಮ್ಮಿ), ಹುಸೈನ್, ಅಸ್ತರ್, ರವೂಫ್ NM, ಮತ್ತು ಜುನೈದ್ ಹಾಜರಿದ್ದರು.
ಹನೀಫ್ ಹಾರಿಸ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಹುಸೈನ್ ಅರಿಕೆರೆ ಧನ್ಯವಾದ ಸಮರ್ಪಿಸಿದರು.
