ರಾಷ್ಟ್ರೀಯ ಸುದ್ದಿ

ನರಹಂತಕ ಶಂಭೂಲಾಲ್ ಗೆ ಬೆಂಬಲ : ಪ್ರತಿಭಟನಕಾರರನ್ನು ಅಟ್ಟಾಡಿಸಿ ಬಾರಿಸಿದ ಪೊಲೀಸರು !

ವರದಿಗಾರ (15.12.2017) : ಲವ್ ಜಿಹಾದ್ ಆರೋಪ ಹೊರಿಸಿ ರಾಜಸ್ಥಾನದಲ್ಲಿ ಮುಸ್ಲಿಂ ವ್ಯಕ್ತಿಯೋವನನ್ನು ಥಳಿಸಿ ಜೀವಂತ ಸುಟ್ಟು ಹಾಕಿದ ಕೃತ್ಯದ ವಿಡಿಯೋ ವೈರಲ್ ಆದ ನಂತರ, ಕೊಲೆ  ಆರೋಪದ ಮೇಲೆ ಬಂಧಿತನಾಗಿರುವ ಶಂಭುಲಾಲ್ ನ ಸಮರ್ಥನೆಯಲ್ಲಿ ರ‍್ಯಾಲಿ ನಡೆಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತನ್ನು ಪೊಲೀಸರು ಬೀದಿಯಲ್ಲಿ ಅಟ್ಟಾಡಿಸಿ ಬಾರಿಸಿದ ಘಟನೆ ರಾಜಸ್ಥಾನದ ಉದಯ್ ಪುರದಲ್ಲಿ ನಡೆದಿದೆ.

ಸುಮಾರು 50 ವರ್ಷ ಪ್ರಾಯದ ಅಮಾಯಕ ವ್ಯಕ್ತಿಯೋರ್ವರನ್ನು ಲವ್ ಜಿಹಾದ್ ಆರೋಪ ಹೊರಿಸಿ ಜೀವಂತ ಸುಟ್ಟು ಹಾಕಿರುವ ಆರೋಪಿಯನ್ನು ಬಂಧಿಸಿರುವುದನ್ನು ವಿರೋಧಿಸಲು ರ‍್ಯಾಲಿ ನಡೆಯಲಿದೆ ಎಂಬ ಮಾಹಿತಿ ಪೊಲೀಸರಿಗೆ ಇತ್ತು. ಈ ಬಗ್ಗೆ ಉದ್ರೇಕಕಾರಿ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿಯ ಬಿಡಲಾಗಿತ್ತು. ಇದಕ್ಕಾಗಿ ಮೊದಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಯನ್ನು ಮಾಡಲಾಗಿತ್ತು. ಮುಂಚಿನ ರಾತ್ರಿಯಿಂದಲೇ 144 ಸೆಕ್ಷನ್ ಹಾಕಿ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು. ಆದರೆ ಈ ನಿಷೇದಾಜ್ಞೆಯನ್ನು  ಗಾಳಿಗೆ ತೂರುತ್ತಾ, ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲು ಜಮೆಯಾಗ ತೊಡಗಿದ್ದರು. ಮೊದಲು ಪ್ರತಿಭಟನಾಕಾರರಿಗೆ ಮಾತುಕತೆಯ ಮೂಲಕ ಸಮಾಧಾನ ಪಡಿಸುವ ಯತ್ನವನ್ನು ಪೊಲೀಸರು ಮಾಡಿದ್ದರು. ಆದರೆ  ಕಾರ್ಯಕರ್ತರು ಪೊಲೀಸರನ್ನೇ ದಬಾಯಿಸಲು ಯತ್ನಿಸಿದಾಗ, ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಅಷ್ಟಕ್ಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಮನವರಿಕೆಯಾದಾಗ ಕಾರ್ಯಕರ್ತರನ್ನು ಚದುರಿಸಲು ಲಾಠಿ ರುಚಿಯ ಮಳೆ ಬರಿಸಿದ್ದಾರೆ. ಲಾಠಿ ಚಾರ್ಜ್ ಆರಂಭವಾದ ನಂತರ ಕಾರ್ಯಕರ್ತರು ದಿಕ್ಕೆಟ್ಟು ಓಡುತ್ತಾ, ಸ್ಥಳೀಯ ಮನೆಗಳಲ್ಲಿ ಕಂಪೌಂಡಿನೊಳಗೆ, ಮನೆಯ ತಾರಸಿಗಳ ಮೇಲೆ ಭಯದಿಂದ ಅಡಗಿ ಕೂತಿದ್ದರು. ಸುಮಾರು ನೂರಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.

ಮೊನ್ನೆಯಿಂದ ಪೊಲೀಸರಿಗೆ ಎಚ್ಚರಿಕೆ ಕೊಡುತ್ತ ರ‍್ಯಾಲಿ  ಮಾಡಿಯೇ ತೀರುತ್ತೇವೆ ಎಂದು ಹೇಳಿಕೊಂಡು ವಿಡಿಯೋ ವೈರಲ್ ಮಾಡಿದ್ದ ಸಂಘಟನೆಯ ಸ್ಥಳೀಯ ಅಧ್ಯಕ್ಷನನ್ನು ಉದಯ್ ಪುರ ತಲುಪುವ ಮೊದಲೇ ವಶಕ್ಕೆ ಪಡೆಯಲಾಗಿತ್ತು.

ಅಮಾಯಕ ವ್ಯಕ್ತಿಯನ್ನು ಜೀವಂತ ಸುಟ್ಟು ಹಾಕಿ, ಮಾನವೀಯತೆಯ ಚಿಂದಿ ಉಡಾಯಿಸಿರುವ ನರಹಂತಕನ ಪರವಾಗಿ ರ‍್ಯಾಲಿ ಕೈಗೊಂಡು,  ಕೊಲೆಯನ್ನು ಸಮರ್ಥಿಸುತ್ತಾ, ಆತನ ಪತ್ನಿಯ ಬ್ಯಾಂಕ್ ಖಾತೆಗೆ ಸುಮಾರು ಮೂರು ಲಕ್ಷಕ್ಕೂ ಮಿಕ್ಕಿದ ಧನ ಸಹಾಯ ಜಮಾವಣೆಯಾಗಿರುವುದು ವರದಿಯಾಗಿತ್ತು. ಒಟ್ಟಿನಲ್ಲಿ ಭಾರತದ ನಾಳೆಗಳ ಕುರಿತು ಸಮಾಜ ಚಿಂತಾಕ್ರಾಂತರಾಗಿರುವುದು ಮಾತ್ರ ಸುಳ್ಳಲ್ಲ. ಸರಕಾರವು ಶಂಬೂ ಲಾಲ್ ಪತ್ನಿಯ ಬ್ಯಾಂಕ್ ಖಾತೆಯನ್ನು ಸಧ್ಯಕ್ಕೆ ತಡೆ ಹಿಡಿದಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group