ವರದಿಗಾರ (ಡಿ.13): ಬಿಜೆಪಿಯ ಹಿರಿಯ ಮುಖಂಡರುಗಳೆ ನಿಮ್ಮಲ್ಲಿ ನನ್ನದೊಂದು ವಿನಮ್ರ ವಿನಂತಿ….. ಆ ಮುಗ್ಧ ಹುಡುಗನ ಸಾವಿನಲ್ಲಿ ರಾಜಕೀಯ ಮಾಡಿದ್ದು ದಯವಿಟ್ಟು ಸಾಕು ಎಂದು ಬಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಬಿಜೆಪಿ ನಾಯಕರನ್ನು ಅತ್ಯಂತ ವಿನಯದಿಂದ ವಿನಂತಿಸಿಕೊಂಡಿದ್ದಾರೆ.
ನಿಜವಾಗಿಯೂ ಹೇಳುತ್ತಿದ್ದೇನೆ ನಿಮಗೆ ಏನು ಬೇಕೋ ಆ ಎರಡು ಕ್ಷೇತ್ರಗಳಲ್ಲಿ ಈಗಾಗಲೇ ಸಿಕ್ಕಿದೆ .ನಿಮಗೆ ಸೋಲುವ ಭಯವಿದ್ದ ಆ ಎರಡೂ ಕ್ಷೇತ್ರಗಳು ಈ ವಿವಾದದಿಂದಾಗಿ ಗೆಲ್ಲುವ ಹಂತಕ್ಕೆ ನಿಜವಾಗಲೂ ತಲುಪಿದ್ದೀರಿ. ಜನ ಭಾವನೆಗಳ ಮೇಲೆ ಮತ ಚಲಾಯಿಸುತ್ತಾರೆ ಅದು ನಿಮಗೆ ಚೆನ್ನಾಗಿ ಗೊತ್ತಿದೆ ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದೀರಿ .ಹಾಗಾಗಿ ಇನ್ನೊಂದು ಪ್ರಾಣ ಹರಣ ಆಗುವುದು ಬೇಡ. ಜನರ ಬದುಕು ಹಾಳಾಗುವುದು ಬೇಡ ಸಾಮರಸ್ಯಕ್ಕೆ ಈಗಾಗಲೇ ಬೆಂಕಿ ಬಿದ್ದು ಆಗಿದೆ .ಇನ್ನು ಪರಸ್ಪರ ಬಡಿದಾಡಿಕೊಂಡು ಸಾಯುವ ಪರಿಸ್ಥಿತಿಗೆ ಊರು ಹೋಗುವುದು ಬೇಡ ದಯವಿಟ್ಟು ನಿಲ್ಲಿಸಿ ಬಿಡಿ ನಿಮ್ಮ ಅಜೆಂಡಾ ಈಡೇರಿದೆ ಇನ್ನೂ ಬೇಡ ಗಲಾಟೆ ಬೇಡ ಎಂದು ಅವರು ಬಿಜೆಪಿ ನಾಯಕರಲ್ಲಿ ವಿನಂತಿಸಿದ್ದಾರೆ.
