ವರದಿಗಾರ (13.12.2017) : ಗುಜರಾತಿನಲ್ಲಿ 22 ವರ್ಷಗಳಷ್ಟು ಕಾಲ ಆಡಳಿತ ನಡೆಸಿ ಇದೀಗ ಜನರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ, ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಮುನ್ಸೂಚನೆ ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ದೃಢಪಟ್ಟಿತ್ತು. ಪ್ರಧಾನಿ ಮೋದಿಯವರೇ ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಾಕ್ ಗುಪ್ತಚರ ಪಡೆ ಕೂಡಾ ಪ್ರಯತ್ನಿಸುತ್ತಿದೆ ಎಂಬ ಆರೋಪ ಹೊರಿಸಿದ್ದರು. ಇದೀಗ ಎಲ್ಲರ ಹತಾಶೆಯ ಪರಮಾವಧಿ ಎಂಬಂತೆ ಗುಜರಾತಿನ ಬಿಜೆಪಿಯ ನಾಯಕನೋರ್ವ, ಬಿಜೆಪಿ ಅಭ್ಯರ್ಥಿಯ ವಿರುದ್ಧ ಪ್ರತಿಭಟಿಸಿದವರ ಮೇಲೆ ಕೋಪೋದ್ರಿಕ್ತನಾಗಿ ಬಹಿರಂಗವಾಗಿ ತಲವಾರು ಝಳಪಿಸುತ್ತಾ ಆತಂಕ ಮೂಡಿಸಿದ ಘಟನೆ ವರದಿಯಾಗಿದೆ.
ಮೆಹ್ಸಾನಾ ಜಿಲ್ಲೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷನೂ ಆಗಿರುವ ಚಂದ್ರೇಶ್ ಪಟೇಲ್ ಎನ್ನುವಾತನೇ ತಲವಾರು ಝಳಪಿಸಿದ ಬಿಜೆಪಿಯ ನಾಯಕ. ಜಿಲ್ಲೆಯ ಪಚೋಟ್ ಗ್ರಾಮದಲ್ಲಿ ಬಿಜೆಪಿಯ ಅಭ್ಯರ್ಥಿ ರಜಿನಿ ಪಟೇಲ್ ವಿರುದ್ಧ ಸಾರ್ವಜನಿಕರು ಪ್ರತಿಭಟಿಸುತ್ತಿದ್ದರು. ಇದರಿಂದ ಕೋಪೋದ್ರಿಕ್ತನಾದ ಚಂದ್ರೇಶ್ ಪಟೇಲ್, ಬಹಿರಂಗವಾಗಿ ತಲವಾರು ಝಳಪಿಸುತ್ತಾ ಜನರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾನೆ ಎಂದು ವರದಿಯಾಗಿದೆ. ಇದರ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ಇದೀಗ ವೈರಲ್ ಆಗಿದ್ದು, ಜನರು ಬಿಜೆಪಿಯ ಆಕ್ರಮಣಕಾರಿ ಸಂಸ್ಕೃತಿಯ ಬಗ್ಗೆ ಕಿಡಿ ಕಾರಿದ್ದಾರೆ.
#Mehsana: Furious dist #BJP IT cell prez Chandresh Patel ran with open sword as people staged protest against #BJP candidate Rajni Patel in Pachot village #Gujarat #GujaratElection2017 pic.twitter.com/iTkCY01IwN
— Tv9 Gujarati (@tv9gujarati) December 12, 2017
