ಬಿಜೆಪಿ, ಸಂಘಪರಿವಾರ ರ್ಯಾಲಿಯಿಂದ ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ
ವರದಿಗಾರ (11.12.2017): ಇತ್ತೀಚೆಗೆ ನಡೆದ ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಮತ್ತು ಸಂಘಪರಿವಾರವು ಕುಮಟಾದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಟನಾ ರ್ಯಾಲಿಯಿಂದ ಕುಮಟಾ ಪರಿಸರದಲ್ಲಿ ಗಲಭೆ ಉಂಟಾಗಿದ್ದು, ಪೊಲೀಸ್ ಪೇದೆಗೆ ಕಲ್ಲೇಟಿನಿಂದ ಗಾಯವಾಗಿದ್ದು, ವಾಹನ ಬೆಂಕಿಯಿಂದ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಕಾನೂನು ರಕ್ಷಕರಾದ ಪೊಲೀಸರ ಮೇಲೆ ಹಾಗೂ ಅಂಗಡಿ, ಮನೆಗಳ ಮೇಲೆ ಪ್ರತಿಭಟನಾ ನಿರತರು ಕಲ್ಲು ತೂರಿದ ಪರಿಣಾಮ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ತಲೆಗೆ ಗಂಭೀರ ಗಾಯವಾಗಿದೆ. ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್ ವಾಹನಗಳಿಗೂ ಕಲ್ಲು ತೂರಲಾಗಿದೆ. ಪಶ್ಚಿಮ ವಲಯ ಐಜಿಪಿ ನಿಂಬಾಲ್ಕರ್ ರವರ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆಂದು ತಿಳಿದು ಬಂದಿದೆ.
ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ:
ಮುಸ್ಲಿಮರ ಮನೆಗೆ ನುಗ್ಗಿ ದಾಳಿ ನಡೆಸುವಂತೆ ಕರೆ ನೀಡಿದ ಸಂಘಪರಿವಾರ ನಾಯಕ:
ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಇಂದು ಕುಮಟಾ ಬಂದ್ ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಬಿಕೋ ಎನ್ನುತ್ತಿತ್ತು. ಬಿಜೆಪಿ ಮತ್ತು ಸಂಘಪರಿವಾರವು ನಡೆಸಿದ ಪ್ರತಿಭಾಟನಾ ರ್ಯಾಲಿಯಿಂದ ಪ್ರೇರಿತರಾದವರು ಭಟ್ಕಳದ ಕಡೆಗೆ ಬರುತ್ತಿದ್ದ ಬಸ್ಸುಗಳನ್ನು ತಡೆದ ಅದರಲ್ಲಿದ್ದ ಮುಸ್ಲಿಂ ಪ್ರಯಾಣಿಕರನ್ನು ಗುರಿಯಾಗಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಂಗಡಿಯಲ್ಲಿ ‘ಮುಸ್ಲಿಮರಿಗೆ ಪ್ರವೇಶವಿಲ್ಲ’ ಬರಹ:
