ವರದಿಗಾರ (11.12.2017): 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟು ನಿಷೇಧ ಮತ್ತು ಜಿಎಸ್ ಟಿ ಪರಿಣಾಮವನ್ನು ಆಡಳಿತದಲ್ಲಿರುವ ಬಿಜೆಪಿಯು ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ತಿಳಿಯಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ.
ಗುಜರಾತಿನಲ್ಲಿ ಜನತೆ ಬಿಜೆಪಿ ವಿರುದ್ಧ ಎದ್ದು ನಿಲ್ಲಲು ನಿರ್ಧರಿಸಿದ್ದಾರೆ. ಬಿಜೆಪಿಯ ನೀತಿಗಳು ರೈತ ಮತ್ತು ವ್ಯಾಪಾರಿಗಳ ವಿರೋಧಿಯಾಗಿರುವ ಕಾರಣ ಅವರ ಮತಗಳಲ್ಲಿ ಗಣನೀಯ ಇಳಿಕೆ ಕಾಣಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನೋಟು ನಿಷೇಧ ಮತ್ತು ಜಿಎಸ್ ಟಿ ಯಿಂದ ವ್ಯಾಪಾರ ಮತ್ತು ಆರ್ಥಿಕತೆ ಕುಸಿದಿದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲೂ ನಡೆದ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ ಎಂದು ಅವರು ಹೇಳಿದ್ದಾರೆ.
