ವರದಿಗಾರ (10.12.2017) : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ‘ಸಾರ್ವಜನಿಕ ಶಿಕ್ಷಣ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವು ಇಂದು ಮಂಗಳೂರಿನ ಸಹೋದಯ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಉಮೇಶ್ ಚಂದ್ರ ಮಾತನಾಡಿ ವಸಾಹತುಶಾಹಿ ವಿರೋಧಿ ನೆಪವನ್ನಿಟ್ಟುಕೊಂಡು ಭಾರತೀಯ ಶಿಕ್ಷಣ ನೀತಿಯನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ಹೇಳಿದರು ಹಾಗೂ ಶ್ರೀರಂಗಪಟ್ಟಣ ಪ್ರಥಮ ದರ್ಜೆ ಕಾಲೆಜು ಸಹಪ್ರಾಧ್ಯಾಪಕರಾದಂತಹ ಡಾ. ಮುಸ್ತಫಾ ಮಾತಾಡಿ ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ವಿಮರ್ಶಾತ್ಮಕ ಚಿಂತನೆಯನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿದರು. ಕ್ಯಾಂಪಸ್ ಫ್ರಂಟ್ ರಾಷ್ಟ್ರಾಧ್ಯಕ್ಷರಾದ ಪಿ.ವಿ ಶುಹೈಬ್ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿಚಾರ ಮಂಡಿಸಿದರು.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ತಪ್ಸೀರ್ ವಹಿಸಿದರು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷರಾದ ಅಥಾವುಲ್ಲ ಉಪಸ್ಥಿತರಿದ್ದರು. ಕಾರ್ಯಕ್ರಮವ್ನನು ಫಯಾಝ್ ದೊಡ್ಡಮನೆ ನಿರೂಪಿಸಿದರು.
ವರದಿ : ಇಮ್ರಾನ್ ಪಿ.ಜೆ
