ಜಿಲ್ಲಾ ಸುದ್ದಿ

ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ 

ವರದಿಗಾರ-ಮೈಸೂರು: ಸ್ಮಾಲ್ ಹೆಲ್ಪ್ ಡೆಸ್ಕ್  ಮತ್ತು ಬ್ಲಡ್ ಡೊನೊರ್ಸ್ ಮಂಗಳೂರು ಮೈಸೂರು ಘಟಕದ ವತಿಯಿಂದ ಮೈಸೂರಿನ ಟಿ ನರಸೀಪುರದಲ್ಲಿ  ಸಸಿಗಳ ವಿತರಣೆ , ಶಾಲಾ ಮಕ್ಕಳಿಗೆ ಪುಸ್ತಕಗಳ ವಿತರಣೆ, ರಕ್ತದಾನ, ನೇತ್ರದಾನ, ದೇಹದಾನ ಮುಂತಾದಳವುಗಳ ಬಗ್ಗೆ ಅರಿವು ಮೂಡಿಸುವ  ಮತ್ತು ಸರಕಾರದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ  ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲಾಯಿತು ಮತ್ತು ಗ್ರಾಮದ ೫೦ ಕ್ಕೂ ಅಧಿಕ ಫಲಾನುಭವಿಗಳಿಗೆ ಭೂಮಿಯ ಪಟ್ಟೆ ಕಡತವನ್ನು ವಿತರಿಸಲಾಯಿತು. ಗ್ರಾಮದಲ್ಲಿ ಬ್ಯಾಂಕ್ ಅಕೌಂಟ್ ಮಾಡಿಸದವರಿಗೆ ಬ್ಯಾಂಕ್ ಅಕೌಂಟ್ ಮಾಡಿಸಿಕೊಡಲಾಯಿತು, ಅರಣ್ಯಾಧಿಕಾರಿಗಳಾದ ಶ್ರೀಮತಿ ಯಮುನಾ ಹಾಗೂ ಪರಮೇಶ್ವರಪ್ಪರವರಿಂದ ಅರಣ್ಯ ರಕ್ಷಣೆ ಮತ್ತು ಪರಿಸರ ರಕ್ಷಣೆ ಬಗ್ಗೆ ಮಾಹಿತಿ ಹಾಗೂ ಗ್ರಾಮಸ್ಥರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು, ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸ್ಮಾಲ್ ಹೆಲ್ಪ್ ಡೆಸ್ಕ್ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು ಬ್ಲಡ್ ಡೊನೊರ್ಸ್ ಮಂಗಳೂರು ವತಿಯಿಂದ ರಕ್ತದಾನ ಮತ್ತು ಅರೋಗ್ಯ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ನಿವೃತ್ತ ಆಹಾರ ಅಧಿಕಾರಿ ಶ್ರೀಕಂಠಯ್ಯ, ಬ್ಲಡ್  ಡೊನೊರ್ಸ್ ಮಂಗಳೂರು ತಂಡದ ಅಧ್ಯಕ್ಷರಾದ ಸಿದ್ದಿಕ್ ಮಂಜೇಶ್ವರ, ಅಡ್ಮಿನ್ ಗಳಾದ, ಇಮ್ತಿಯಾಜ್ ಬಜ್ಪೆ, ಕಲಂದರ್ ನೌಶಾದ್ ಕರ್ನಿರೆ, ಮುಸ್ತಾಫಾ ಕೆ ಸಿ ರೋಡ್, ಝಹೀರ್ ಶಾಂತಿನಗರ , ಆರಿಫ್ ಕರ್ನಿರೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ  ಶ್ರೀ ಪಟ್ಟುಬುದ್ದಿ , ಶ್ರೀ ಪ್ರಭು, ಶ್ರೀಮತಿ ಪುಟ್ಟಮ್ಮ,  ಯಾರಗನಹಳ್ಳಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಾಯತ್ರಿ , ಹೊಸುರುಹುಂಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಜೇಶ್ ರವರು ಉಪಸ್ಥಿತರಿದ್ದರು
ಸ್ವಯಂಪ್ರೇರಿತರಾಗಿ ದೇಹದಾನ ಮಾಡಲು ಇಚ್ಛಿಸಿದ ಇಬ್ಬರು ವ್ಯಕ್ತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು  ಮತ್ತು ಮಂಗಳೂರಿನಿಂದ ಮೈಸೂರಿನ ಟಿ ನರಸೀಪುರಕ್ಕೆ ಬಂದು ಕಾರ್ಯಕ್ರಮಕ್ಕೆ ಸಹಕರಿಸಿದ ಬ್ಲಡ್ ಡೊನೊರ್ಸ್ ಮಂಗಳೂರು ತಂಡವನ್ನು ಸ್ಮಾಲ್ ಹೆಲ್ಪ್ ಡೆಸ್ಕ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸ್ಮಾಲ್ ಹೆಲ್ಪ್ ಡೆಸ್ಕ್ ತಂಡದ ವೃತ್ತಿಯಲ್ಲಿ ಗ್ರಾಮ ಲೆಕ್ಕಿಗರಾಗಿರುವ ಶ್ರುತಿ , ಜಬೀನಾ , ನೂರುಲ್ಲಾ , ಪದ್ಮ ಮತ್ತ್ತು ಲಕ್ಷ್ಮಿ ಯಶಸ್ವಿಯಾಗಿ ಸಂಘಟಿಸಿದರು. ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿ, ಜಬೀನಾ ಸ್ವಾಗತಿಸಿ ನೂರುಲ್ಲಾ ವಂದಿಸಿದರು. ಕೊನೆಯದಾಗಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು. 
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group