◾ ಶಹೀದ್ ಮುಸ್ತಫಾ ಕಾವೂರ್ ಹೆಸರಿನಲ್ಲಿ ವೇದಿಕೆ ಸಜ್ಜು
ವರದಿಗಾರ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾವೂರು ಏರಿಯಾದ ವತಿಯಿಂದ ನಡೆಯುವ ಪ್ರವಾದಿ ಸಂದೇಶ ಕಾರ್ಯಕ್ರಮಕ್ಕೆ ಮುಖ್ಯ ಪ್ರಭಾಷಣಕಾರರಾಗಿ ಕೇರಳದ ಪ್ರಸಿದ್ಧ ವಾಗ್ಮಿ ಹಾಫಿಲ್ ಅಫ್ಸಲ್ ಖಾಸಿಮಿ ಕೊಲ್ಲಂ ಆಗಮಿಸಲಿರುವರು
ಈ ಕಾರ್ಯಕ್ರಮದ ಸಭಾದ್ಯಕ್ಪತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾವೂರು ಏರಿಯಾದ ಅಧ್ಯಕ್ಷರಾದ ನೌಶಾದ್ ಕಾವೂರು ವಹಿಸಲಿರುವರು.
ಪ್ರಾಸ್ತವಿಕವಾಗಿ ಮಾತನಾಡಲು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಇದರ ರಾಜ್ಯ ಪ್ರದಾನ ಕಾರ್ಯದರ್ಶಿ ಯಾದ ಜಾಫರ್ ಸಾದಿಕ್ ಫೈಝಿ ಆಗಮಿಸಲಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾದ್ಯಕ್ಪರಾದ ನವಾಝ್ ಉಳ್ಳಾಲ, ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾದ್ಯಕ್ಪರಾದ ಹನೀಫ್ ಖಾನ್ ಕೊಡಾಜೆ, ಕೂಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಕೆ ಎಮ್ ಶರೀಫ್, ಅಲ್ ಫಾರೂಕ್ ಜುಮಾ ಮಸ್ಜಿದ್ ಶಾಂತಿನಗರ ಅಧ್ಯಕ್ಷರಾದ ಕೆ ಖಾದರ್, ಬದ್ರಿಯಾ ಜುಮಾ ಮಸ್ಜಿದ್ ಕಾವೂರು ಅಧ್ಯಕ್ಷರಾದ ಉಮರುಲ್ ಫಾರೂಕ್ ಬಾಗವಹಿಸಲಿದ್ದು, ಅದೇ ರೀತಿ ಈ ಕಾರ್ಯಕ್ರಮದ ಪ್ರಯುಕ್ತ ಇಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾವೂರು ವತಿಯಿಂದ ಶಹೀದ್ ಮುಸ್ತಫಾ ಕಾವೂರುರವರ ಸ್ಮರಣಾರ್ಥವಾಗಿ ಅರ್ಹ ಆಯ್ದ ಕೆಲವು ಬಡ ಹೆಣ್ಣುಮಕ್ಕಳಿಗೆ ಟೈಲರಿಂಗ್ ಮಿಶಿನ್ ವಿತರಣೆ ಮಾಡಲಾಗುವುದು ಎಂದು ಕಾರ್ಯದರ್ಶಿ ಶಬೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
