ರಾಷ್ಟ್ರೀಯ ಸುದ್ದಿ

ಫ್ಯಾಸಿಸ್ಟರ ಗುಪ್ತ ಕಾರ್ಯಸೂಚಿಗಳನ್ನು ಸೋಲಿಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು : ಎಸ್ ಡಿ ಪಿ ಐ ಗುಜರಾತ್

ವರದಿಗಾರ (09.12.2017) : ಸದ್ಯ ದೇಶವನ್ನಾಳುತ್ತಿರುವ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ಕೋಮುವಾದಿ ಕಾರ್ಯಸೂಚಿಯೊಂದಿಗೆ ದೇಶವನ್ನು ಒಡೆಯುವ ತಂತ್ರಕ್ಕೆ ಕೈ ಹಾಕಿದೆ. ಭಾರತದ ಜಾತ್ಯತೀತ ಸಂವಿಧಾನವನ್ನು ಹಿಂದುತ್ವದ ಸಂವಿಧಾನವನ್ನಾಗಿ ಬದಲಾಯಿಸುವ ಕಡೆ ಹೆಜ್ಜೆ ಹಾಕಿದೆ. ಅದಕ್ಕೆ ಪೂರಕವಾಗಿ ಸಂಸತ್ತಿನಲ್ಲೂ ವಿರೋಧಪಕ್ಷಗಳ ಬಲ ಕಡಿಮೆಯಾಗಿದೆ. ಆರೆಸ್ಸೆಸ್ಸಿನ ಗುಪ್ತ ಕಾರ್ಯಸೂಚಿಯನ್ನು ಎದುರಿಸಲು ವಿರೋಧ ಪಕ್ಷಗಳಿಂದಲೂ ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿವೆ. ಫ್ಯಾಸಿಸ್ಟರು ತಮ್ಮ ಕಾರ್ಯಸೂಚಿಗಳಲ್ಲಿ ಸಫಲವಾದರೆ ಭಾರತದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಕಾಣಲು ಸಾಧ್ಯವಿಲ್ಲ. ಭಾರತದ ಬೆನ್ನೆಲುಬಾಗಿರುವ ಜಾತ್ಯತೀತತೆ ನಾಶವಾಗುತ್ತದೆ ಮತ್ತು ಪ್ರಜೆಗಳ ವೈಯುಕ್ತಿಕ ಸ್ವಾತಂತ್ರ್ಯಕ್ಕೂ ಧಕ್ಕೆಯಾಗುತ್ತದೆ. ಹೀಗಿರುವಾಗ ಫ್ಯಾಸಿಸ್ಟರನ್ನೆದುರಿಸಲು ಜಾತ್ಯತೀತ ಶಕ್ತಿಗಳೆಲ್ಲರೂ ಒಂದಾಗಬೇಕಾದ ಅನಿವಾರ್ಯತೆ ಇದೆಯೆಂದು ಗುಜರಾತ್ ಎಸ್ ಡಿ ಪಿ ಐ,  ಅಹ್ಮದಾಬಾದಿನಲ್ಲಿ ನಡೆದ “ಜನಾದೇಶ್ ಸಮ್ಮೇಳನ್” ಎನ್ನುವ ಕಾರ್ಯಾಗಾರದಲ್ಲಿ ಅಭಿಪ್ರಾಯಪಟ್ಟಿದೆ.

ಗುಜರಾತ್ ರಾಜ್ಯ ಎಸ್ ಡಿ ಪಿ ಐ, ಅಹ್ಮದಾಬಾದಿನ ‘ಹೋಸ್ಟ್ ಇನ್’ ಹೋಟೆಲಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ರಾಜ್ಯದ ಸುಮಾರು 400 ಕ್ಕೂ ಹೆಚ್ಚಿನ ರಾಜಕೀಯ ವಿಮರ್ಶಕರು ಮತ್ತು ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ದೇಶದ ಜಾತ್ಯತೀತತೆ, ಸಂವಿಧಾನ, ಶಾಂತಿ, ಭ್ರಷ್ಟಾಚಾರ ನಿಗ್ರಹ ಮತ್ತು ಮಾನವ ಹಕ್ಕುಗಳ ಉಳಿವಿಗಾಗಿ ಎಸ್ ಡಿ ಪಿ ಐ ದೇಶದಾದ್ಯಂತ ಧನಾತ್ಮಕ ರಾಜಕೀಯದ ಮಾರ್ಗವನ್ನನುಸರಿಸುತ್ತಿದೆ. ನಮ್ಮ ಇಂದಿನ ಕಾರ್ಯಕ್ರಮದ ಉದ್ದೇಶವೂ, ಗುಜರಾತಿನಲ್ಲಿ ಏಕ ಮಾತ್ರ ಜಾತ್ಯತೀತ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಫ್ಯಾಸಿಸ್ಟರನ್ನು ಸೋಲಿಸಬೇಕಾಗಿದೆ. ಅದಕ್ಕಾಗಿ ನಾವು ರಾಜ್ಯದ ಎಲ್ಲಾ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡಿದ್ದೇವೆ ಎಂದು ಪಕ್ಷ ಅಭಿಪ್ರಾಯಪಟ್ಟಿತು.ಸಭೆಯಲ್ಲಿ ಎಸ್ ಡಿ ಪಿ ಐ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಅಡ್ವೊಕೇಟ್ ಶರ್ಫುದ್ದೀನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಶಾಫಿ ಹಾಗೂ ಎಂ ಕೆ ಫೈಝಿ, ಗುಜರಾತ್ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷೆ ಶ್ರೀಮತಿ ಕುಂಕುಮ್ ಜೀ, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ,ರಾಜಸ್ಥಾನ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಮೊಹಮ್ಮದ್ ರಿಝ್ವಾನ್ ಖಾನ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಮತ್ತು ಮುಂಬೈ ಹೈಕೋರ್ಟ್ ಮಾಜಿ ನ್ಯಾಯಾಧೀಶ ಬಿ ಜಿ ಕೋಸ್ಲೆ ಪಾಟೀಲ್ ಹಾಜರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group