ರಾಷ್ಟ್ರೀಯ ಸುದ್ದಿ

ತ್ರಿವಳಿ ತಲಾಖ್ : ಯೋಗಿ ಆದಿತ್ಯನಾಥ್ ಗೆ ವಂದಿಸಲು ಬುರ್ಖಾ ಹಾಕಿ ಮೆರವಣಿಗೆ ಮಾಡಿದ್ದು ಹಿಂದೂ ಹುಡುಗಿಯರು !

ವರದಿಗಾರ (09.12.2017) : ತ್ರಿವಳಿ ತಲಾಖಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಕೊಡುಗೆಯನ್ನು ಅಭಿನಂಧಿಸಲು ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡು ಪೆರೇಡ್ ನಡೆಸಿದ್ದು, ತ್ರಿವಳಿ ತಲಾಖ್ ವಿಷಯದಲ್ಲಿ ಮುಸ್ಲಿಮರೇ ಯೋಗಿಗೆ ಅಭಿನಂಧನೆ ಸಲ್ಲಿಸುತ್ತಿದ್ದಾರೆ ಎನ್ನುವ ಭಾವನೆ ಜನರಲ್ಲಿ ಬರುವಂತೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತೆನ್ನಲಾಗಿದೆ. ಆದರೆ ಪೆರೇಡಿನಲ್ಲಿ ಭಾಗವಹಿಸಿದ್ದ 22 ಮಂದಿ ಬಾಲಕಿಯರಲ್ಲಿ ಕನಿಷ್ಟ 10 ಮಂದಿ ಹುಡುಗಿಯರು ಹಿಂದೂಗಳಾಗಿದ್ದರು ಎಂದು ತಿಳಿದು ಬಂದಿದೆ. ಇದು ಬಿಜೆಪಿಗೆ ಮುಸ್ಲಿಮ್ ಸಮುದಾಯದವರೂ ಬೆಂಬಲಿಸುತ್ತಿದ್ದಾರೆ ಎಂದು ತೋರ್ಪಡಿಸುತ್ತಿರುವ ಬಿಜೆಪಿಯ ತಂತ್ರದ ಕುರಿತೇ ಜನ ಸಂಶಯ ವ್ಯಕ್ತಪಡಿಸುವಂತಾಗಿದೆ.

ಕಾನ್ಪುರದ ಮಹಾರಾಣಾ ಪ್ರತಾಪ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಖುದ್ದು ಯೋಗಿ ಆದಿತ್ಯನಾಥ್ ರವರು ಇದರ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪೆರೇಡನ್ನು ವಿದ್ಯಾರ್ಥಿಗಳೇ ಆಯೋಜಿಸಿದ್ದರು ಎಂದು ಶಾಲಾ ಮೂಲಗಳು ಹೇಳುತ್ತಿವೆಯಾದರೂ, ಮುಸ್ಲಿಮರೇ ಯೋಗಿಗೆ ಬೆಂಬಲವಾಗಿದ್ದಾರೆ ಎನ್ನುವ ರೀತಿಯಲ್ಲಿ ಜನ ಭಾವಿಸುವಂತಾಗಲು ಹಿಂದೂ ಹುಡುಗಿಯರಿಗೂ ಬುರ್ಖಾ ಹಾಕಿಸಿ ಪೆರೇಡ್ ನಡೆಸಿದ್ದು, ಒಂದು ರೀತಿಯಲ್ಲಿ ಜನರನ್ನು ಮೂರ್ಖರನ್ನಾಗಿಸುವ ತಂತ್ರವೆಂದು ಹಲವರು ಟೀಕಿಸಿದ್ದಾರೆ.

ಇತ್ತೀಚೆಗೆ ಯೋಗಿ ಆದಿತ್ಯನಾಥ್ ರವರ ಸಭೆಯೊಂದರಲ್ಲಿ ಬುರ್ಖಾ ಹಾಕಿಕೊಂಡು ಬಂದಿದ್ದ ಬಿಜೆಪಿಯ ಮುಸ್ಲಿಮ್ ಕಾರ್ಯಕರ್ತೆಯೋರ್ವಳ ಬುರ್ಖಾವನ್ನು ಸಭೆಯ ಮಧ್ಯದಲ್ಲಿಯೇ ಪೊಲೀಸರು ಕಳಚಿ ಹಾಕಿದ್ದು ವರದಿಯಾಗಿತ್ತು. ಇದೇ ವೇಳೆ ಈಗ ಹಿಂದೂ ಹುಡುಗಿಯರಿಗೆ ಬುರ್ಖಾ ಹಾಕಿಸಿ ಅವರನ್ನು ಮುಸ್ಲಿಮರಂತೆ ಬಿಂಬಿಸುವ ಪ್ರಯತ್ನವೂ ನಡೆಯುತ್ತಿರುವುದು ಖಂಡನೀಯ ಎಂದು ಹಲವು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group