ರಾಜ್ಯ ಸುದ್ದಿ

ನನಗೆ ಹೆಗಡೆಗಿಂತಲೂ ಕೆಟ್ಟದಾಗಿ ಬಯ್ಯಲು ಬರುತ್ತದೆ, ಆದರೆ, ಅದು ಬಿಜೆಪಿಯ ಸಂಸ್ಕೃತಿ: ಸಿದ್ದರಾಮಯ್ಯ 

ವರದಿಗಾರ (09.12.2017): ‘ಸಿದ್ದರಾಮಯ್ಯ ಪಾಪದ ಪಿಂಡ’ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಯವರ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರದು ಆಚಾರವಿಲ್ಲದ ನಾಲಗೆ. ಅವರ ನಾಲಗೆ ಸಂಸ್ಕೃತಿಯನ್ನು ಹೇಳುತ್ತದೆ. ಪುರಂದರದಾಸರು ‘ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದಿದ್ದಾರೆ. ಅದು ಇವರಿಗೆ ಅನ್ವಯಿಸುತ್ತದೆ ಎಂದು ಖಾರವಾಗಿ ಹೇಳಿದ್ದಾರೆ.

‘ಬಿಜೆಪಿಯವರು ತಮಗೆ ಸಂಸ್ಕೃತಿ, ಸಂಸ್ಕಾರ ಇದೆ ಎಂದು ಹೇಳುವುದು ಇದೇ ಏನು? ನಾನು ಹಳ್ಳಿಯಿಂದ ಬಂದವನು. ನನಗೆ ಹೆಗಡೆಗಿಂತಲೂ ಕೆಟ್ಟದಾಗಿ ಬಯ್ಯಲು ಬರುತ್ತದೆ. ಆದರೆ, ಆ ರೀತಿಯ ಭಾಷೆ ಬಳಸಬಾರದು. ಮಣಿಶಂಕರ್‌ ಅಯ್ಯರ್ ಅವರು ಪ್ರಧಾನಿಗೆ ‘ನೀಚ’ ಎಂಬ ಪದ ಬಳಸಿದ ಕಾರಣಕ್ಕೆ, ಅವರನ್ನು ಪಕ್ಷದಿಂದಲೇ  ಉಚ್ಚಾಟಿಸಲಾಗಿದೆ. ಇದೇ ಬೆಳವಣಿಗೆಯನ್ನು ಬಿಜೆಪಿಯಿಂದ ನಿರೀಕ್ಷೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಕೋಮುವಾದಿಗಳಿಂದ ನಾವು ಏನನ್ನೂ ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group