ಸುತ್ತ-ಮುತ್ತ

ಕಾಲೇಜು ವ್ಯಾಸಂಗದ ಮಧ್ಯೆ ವಿದ್ಯಾರ್ಥಿಯೊಬ್ಬನ ಸಾಮಾಜಿಕ ಕಳಕಳಿ ; ಶಿಕ್ಷಣದ ಭಾಗ್ಯ ಪಡೆದ ಅಲೆಮಾರಿ ಮಕ್ಕಳು !

ವರದಿಗಾರ (08.12.2017) :  ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ಸಾಮಾಜಿಕ ಕಳಕಳಿಯಿಂದಾಗಿ ನಗರದ ಆಸುಪಾಸಿನಲ್ಲಿ ಭಿಕ್ಷೆಯನ್ನೇ ತಮ್ಮಕಾಯಕವನ್ನಾಗಿಸಿದ್ದ ಕುಟುಂಬವೊಂದರ ಆರು ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.

ಅಬೂಬಕ್ಕರ್ ಸಿದ್ದೀಕ್

ಅಬೂಬಕ್ಕರ್ ಸಿದ್ದೀಕ್ ಎನ್ನುವ ವಿದ್ಯಾರ್ಥಿಯೇ ತನ್ನ ಕಾಲೇಜು ವ್ಯಾಸಂಗದ ನಡುವೆ ಈ ರೀತಿಯ ಸಮಾಜಸೇವೆಯಲ್ಲಿ ನಿರತರಾಗಿರುವವನು. ತನ್ನ ಕಾಲೇಜಿನ ಪಠ್ಯೇತರ ಯೋಜನೆಯಾದ “ದಿವ್ಯಾಸ್ ಸೇವಾ ಯೋಜನೆ”ಯ ಅಂಗವಾಗಿ ಅಬೂಬಕ್ಕರ್ ಸಿದ್ದೀಕ್, ಮಂಗಳೂರು ನಗರದಾದ್ಯಂತ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಅಲೆಮಾರಿ ಕುಟುಂಬವೊಂದನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಆ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ರ ಬರೆದು ಮಾಹಿತಿ ನೀಡಿದ್ದಾನೆ.

ಮಾಹಿತಿ ತಿಳಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಿಸಿ, ಕುಟುಂಬದ ಆರು ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಂಡು, ಅವರಿಗೆ ಆಶ್ರಯ, ವಸತಿ ಮತ್ತು ಮುಂದಿನ ಶಿಕ್ಷಣಕ್ಕಾಗಿ ತಮ್ಮ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೊಂದಿಗೆ ವಿಚಾರಿಸಿದಾಗ, ಆರು ಮಕ್ಕಳು ಈಗ ನಮ್ಮ ಕೇಂದ್ರದಲ್ಲಿದ್ದು ಹಾಗೂ ಅವರೆಲ್ಲರೂ ಸಣ್ಣ ವಯಸ್ಸಿನವರಾಗಿರುವುದರಿಂದ ಮೂರು ಮಂದಿ ಮಹಿಳೆಯರನ್ನೂ ಕೇಂದ್ರದಲ್ಲಿರಿಸಿ ಆಶ್ರಯ ನೀಡಲಾಗಿದೆ. ಸದ್ಯಕ್ಕೆ ಮಕ್ಕಳಿಗೆ ಕೌನ್ಸಿಲಿಂಗ್ ನೀಡಬೇಕಾಗಿದ್ದು, ತದ ನಂತರ ಅವರ ಶಿಕ್ಷಣದ ಕುರಿತಂತೆ ಯೋಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿ ಅಬೂಬಕ್ಕರ್ ಸಿದ್ದೀಕ್, ತನ್ನ ಕಾರ್ಯವು ಕಾಲೇಜು ಯೋಜನೆಯ ಭಾಗವಾಗಿದ್ದರೂ ಕೂಡಾ, ತನ್ನ ಸೇವೆಯಿಂದಾಗಿ ಅದರಲ್ಲಿ ಒಂದು ಮಗು ಓದಿ ಉತ್ತಮ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬಂದರೆ ನನ್ನ ಪ್ರಯತ್ನವು ಸಾಕಾರವಾಗುವುದೆಂದು ಧನ್ಯತಾಭಾವದಿಂದ ಹೇಳುತ್ತಾನೆ. ಮಾತ್ರವಲ್ಲ ಇಂತಹಾ ಕಾರ್ಯಗಳನ್ನು ಯೋಜನೆಯಿಂದ ಹೊರತುಪಡಿಸಿ ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದಾಗಿ ಹೇಳುತ್ತಾನೆ.

ತಮ್ಮ ಕಾರ್ಯಗಳು ಯಶಸ್ವಿಯಾಗಲೆಂದು ಹಾರೈಸುತ್ತೇವೆ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group