ರಾಜ್ಯ ಸುದ್ದಿ

ಗೌರಿ ಲಂಕೇಶ್ ಹತ್ಯಾ ತನಿಖೆಯ ವೇಳೆ ಬಹಿರಂಗವಾದ ಸ್ಪೋಟಕ ಸತ್ಯ : ಪತ್ರಕರ್ತ ರವಿ ಬೆಳಗೆರೆ ಬಂಧನ !

ವರದಿಗಾರ (08.12.2017) :  ರಾಜ್ಯವೇ ಬೆಚ್ಚಿಬೀಳಿಸುವ ಬೆಳವಣಿಗೆಯೊಂದರಲ್ಲಿ ಪತ್ರಕರ್ತ ಮತ್ತು ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರನ್ನು ಬಂಧಿಸಲಾಗಿದೆ. ಕೊಲೆ ನಡೆಸಲು ಶಾರ್ಪ್ ಶೂಟರ್ ಒಬ್ಬರಿಗೆ ಸುಪಾರಿ ಕೊಟ್ಟ ಪ್ರಕರಣವೊಂದರಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು, ರವಿ ಬೆಳಗೆರೆಯವರನ್ನು ಅವರ ಪದ್ಮನಾಭನಗರದ ಮನೆಯಿಂದ ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಗೌರಿ ಲಂಕೇಶ್ ಹತ್ಯೆಯ ಸಂಬಂಧವಾಗಿ ವಿಶೇಷ ತನಿಖಾ ತಂಡ,  ಭೀಮಾ ತೀರದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಮತ್ತು ಸಹಚರರನ್ನು ತನಿಖೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿತ್ತು. ತನಿಖೆಯ ವೇಳೆ ಈ ಸ್ಪೋಟಕ ಮಾಹಿತಿಯನ್ನು ಶಶಿ ಮತ್ತು ತಂಡ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.

ರವಿ ಬೆಳಗೆರೆಯ ಎರಡನೆ ಪತ್ನಿ ಯಶೋಮತಿ ಮತ್ತು  ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರನಾಗಿದ್ದ ಸುನಿಲ್ ಹೆಗ್ಗರವಳ್ಳಿ ನಡುವೆ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಇದರಿಂದ ಕೆರಳಿದ್ದ ರವಿ ಬೆಳಗೆರೆ, ಸುನಿಲ್ ರನ್ನು ಹತ್ಯೆ ಮಾಡಲು ವಿಜಯಪುರ ಚಡಚಣದ ಶಾರ್ಪ್ ಶೂಟರ್ ಶಶಿಗೆ 30 ಲಕ್ಷ ಸುಪಾರಿ ಕೊಟ್ಟಿದ್ದರೆಂಬ ಸ್ಪೋಟಕ ಮಾಹಿತಿಯನ್ನು ಶಶಿ ಮತ್ತವನ ಸಹಚರರು,  ತನಿಖಾ ತಂಡದ ಮುಂದೆ ಬಾಯಿ ಬಿಟ್ಟಿದ್ದನೆಂದು ತಿಳಿದುಬಂದಿದೆ. ಈ ಆರೋಪದಲ್ಲಿ ಪೊಲೀಸರು ಈಗ ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group