ರಾಷ್ಟ್ರೀಯ ಸುದ್ದಿ

ರಾಜಸ್ಥಾನ: ಜೀವಂತ ದಹಿಸಿ ಹತ್ಯೆ ಮಾಡಿದ ಪೈಶಾಚಿಕ ಪ್ರಕರಣ ; ‘ಲವ್ ಜಿಹಾದ್’ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ : ಐಜಿಪಿ

ವರದಿಗಾರ (08.12.2017) :  ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಮುಸ್ಲಿಂ ವ್ಯಕ್ತಿಯನ್ನು ಜೀವಂತ ದಹಿಸಿದ ಪ್ರಕರಣದಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ ಎಂದು IG ಅಶೋಕ್ ಶ್ರೀವಾಸ್ತವ್ ರವರು ಸ್ಪಷ್ಟ ಪಡಿಸಿದ್ದಾರೆ.

ರಾಜಸ್ಥಾನದ ರಾಜ್ ಸಮಂದ್ ನಲ್ಲಿ ಮುಸ್ಲಿಂ ವ್ಯಕ್ತಿಯೋರ್ವರನ್ನು ಕೃಷಿಗೆ ಬಳಸಲ್ಪಡುವ ಆಯುಧದಿಂದ ಹೊಡೆದು ನಂತರ ಜೀವಂತ ದಹಿಸಿದ್ದ ಪ್ರಕರಣವನ್ನು ‘ಲವ್ ಜಿಹಾದ್’ ವಿರುದ್ದದ ಪ್ರತೀಕಾರ ಎಂಬತೆ ಬಿಂಬಿಸಲಾಗಿದ್ದರೂ ಕೂಡ, ಈ ಪ್ರಕರಣದಲ್ಲಿ ಆ ಕುರಿತಂತೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು IG ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.

ಕೊಲೆಯಾಗಿರುವ 50 ವರ್ಷ ಪ್ರಾಯದ ಅಪ್ರಾಝುಲ್ ಖಾನ್ ಮೂಲತಃ ಬಂಗಾಳದವರಾಗಿದ್ದು, 1998 ರಿಂದ ರಾಜಸ್ಥಾನದ ಬಂಗಾಳಿ ಸಮುದಾಯದ ವಾಸವಿರುವ ರಾಜ್ ಸಮಂದ್ ನಲ್ಲಿ ವಾಸಿಸುತ್ತಿದ್ದರು. ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳ ಬಳಿಯೂ ಸುಳಿಯದೆ, ತಮ್ಮಷ್ಟಕ್ಕೆ ಜೀವನ ಸಾಗಿಸುತ್ತಿದ್ದರು. ಇವರಿಗೆ 4 ಮಕ್ಕಳಿದ್ದು, ಮೂವರಿಗೆ ಮದುವೆಯಾಗಿದೆ.

ಈ ಕೊಲೆಯ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಂಚಿರುವ ಹಂತಕ  ಶಂಬುನಾಥ್ ರಾಯಿಗರ್ ಹಾಗೂ ವಿಡಿಯೋ ಮಾಡುತ್ತಿದ್ದ 15 ವರ್ಷ ಪ್ರಾಯದ ಆತನ ಸೋದರ ಅಳಿಯನನ್ನೂ ಬಂಧಿಸಲಾಗಿದೆ

ಹಂತಕನಿಗೆ ಮರಣದಂಡನೆ ಕೋರುತ್ತೇವೆ : ರಾಜಸ್ಥಾನ ಪೊಲೀಸ್

ಈ ಘಟನೆಯು “”ಅಪರೂಪದಲ್ಲೇ ಅಪರೂಪದ ಪ್ರಕರಣ”ವಾಗಿದ್ದು, ಪೊಲೀಸ್ ಮಹಾ ನಿರ್ದೇಶಕ ಓಮ್ ಪ್ರಕಾಶ್ ಗಲ್ಹೋತ್ರಾರವರು, ‘ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಹಂತಕನಿಗೆ ಮರಣದಂಡನೆಗಿಂತ ಕಡಿಮೆ ಶಿಕ್ಷೆಯನ್ನು ಕೋರಲಾಗುವುದಿಲ್ಲ’ ಎಂದು ಹೇಳಿದ್ದಾರೆ. ಹಂತಕ ಶಂಭುನಾಥ್,  ಇತರ ವೀಡಿಯೋಗಳಲ್ಲಿ ತನ್ನ ಕೋಮುವಾಧಿ ಮನೋಸ್ಥಿತಿಯನ್ನು ಹೊರಗೆಡಹಿದ್ದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಜನರನ್ನು ವಿಚಾರಣೆ ನಡೆಸಲಾಗಿದ್ದು, ಈಗ ಆರೋಪಿಯ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಂತೆಲ್ಲ ಇತರ ಸೆಕ್ಷನ್’ಗಳನ್ನು ಹಾಕಲಾಗುವುದು ಎಂದಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group