ವರದಿಗಾರ ವಿಶೇಷ

25 ವರ್ಷಗಳು ಕಳೆದರೂ ಕೇಸು, ಎಫ್ ಐ ಆರ್ ದಾಖಲಾಗದ ಅಯೋಧ್ಯೆಯ ನರಮೇಧ!!

ಅಂದು ಕರಸೇವಕರ ವೇಷದಲ್ಲಿದ್ದ ರಾಕ್ಷಸರು ಧ್ವಂಸಗೊಳಿಸಿದ್ದು ಕೇವಲ ಬಾಬರಿ ಮಸೀದಿಯನ್ನಲ್ಲ: ನಗರದ 23 ಮಸೀದಿಗಳು, ಮುಸಲ್ಮಾನರ ಮನೆ, ಅಂಗಡಿಗಳು ನಾಶಗೊಂಡಿದ್ದವು

ಡಿಸೆಂಬರ್ 6, 1992, ಜಗತ್ತಿನ ಮುಂದೆ ಭಾರತವು ತಲೆ ತಗ್ಗಿಸಿದ ಕರಾಳ ದಿನ. ಮತಾಂಧತೆಯ ಅಮಲಿನಲ್ಲಿ ರಾಜಕೀಯ ಶಕ್ತಿಗಳ ಹುನ್ನಾರದಂತೆ ಕೋಮುವಾದಿಗಳ ಬೃಹತ್ ಗುಂಪು ಶತಮಾನಗಳ ಹಳೆಯದಾದ ಮಸೀದಿಯೊಂದನ್ನು ಹೊಡೆದುರುಳಿಸಿದ ದಿನ. ಈ ಮಸೀದಿಯ ಧ್ವಂಸವು ಭಾರತದ ಸಾಮಾಜಿಕ-ರಾಜಕೀಯ ಸನ್ನಿವೇಷಗಳನ್ನು ಯಾವ ರೀತಿಯಲ್ಲಿ ಬದಲಿಸಿತು ಎನ್ನುವುದು ನಮಗೆಲ್ಲಾ ತಿಳಿದ ವಿಚಾರ.

ಬಾಬರೀ ಧ್ವಂಸದ ಬಳಿಕ ಮುಂಬೈ ಮಹಾನಗರಿ ಸೇರಿದಂತೆ ದೇಶದಾದ್ಯಂತ ನಡೆದ ಕೋಮು ಗಲಭೆಗಳ ಬಗ್ಗೆಯೂ ನಾವು ಕೇಳಿದ್ದೇವೆ, ಓದಿದ್ದೇವೆ. ನಾವ್ಯಾರೂ ಕೇಳರಿಯದ, ಯಾವುದೇ ಕೇಸು ದಾಖಲಾಗದ ನರಮೇಧವೊಂದು ಇಂದೂ ಆ ರಾಕ್ಷಸರಿಂದ ಬದುಕುಳಿದವರನ್ನು ಕಾಡುತ್ತಿದೆ.

ಬಾಬರೀ ಧ್ವಂಸವನ್ನು ನ್ಯಾಯೀಕರಿಸುವ ಹಲವು ವಿದ್ಯಾವಂತ ಬಲಪಂಥೀಯರ ಪ್ರಕಾರ ಅಂದು ಕರಸೇವಕರು ಶತಮಾನಗಳ ಅವಮಾನವನ್ನಷ್ಟೇ ಉರುಳಿಸಿದ್ದಾರೆ ಹೊರತು ಅಯೋಧ್ಯೆಯ ಇನ್ಯಾವುದೇ ಮಸೀದಿಯನ್ನು ಹಾನಿಗೊಳಿಸಿಲ್ಲ. ಹೌದು, ನಿನ್ನೆಯಷ್ಟೇ ಈ ರೀತಿಯ ಒಂದು ವೈರಲ್ ಟ್ವೀಟ್ ಓದಿದೆ.

https://twitter.com/rishibagree/status/938257734557892615

ಅಂದು ಕರಸೇವಕರ ವೇಷದಲ್ಲಿದ್ದ ರಾಕ್ಷಸರು ಹೊಡೆದುರುಳಿಸಿದ್ದು ಕೇವಲ ಬಾಬರೀ ಮಸೀದಿಯನ್ನಲ್ಲ!
ಬಾಬರೀ ಧ್ವಂಸದ ನಂತರ ಅಯೋಧ್ಯೆ ನಗರವು ಕರಸೇವಕರ ರುಧ್ರ ನರ್ತನಕ್ಕೆ ಸಾಕ್ಷಿಯಾಯಿತು. ಹಲವಾರು ಮುಸ್ಲಿಮರ ಮನೆ, ಅಂಗಡಿಗಳು ಹಾಗೂ 23 ಸ್ಥಳೀಯ ಮಸೀದಿಗಳು ನಾಶಗೊಳಿಸಲ್ಪಟ್ಟಿತು. 28 ಮುಸ್ಲಿಮರ ಹತ್ಯೆ ಮಾಡಲಾಯಿತು. ಆದರೆ, ಈ ಬಗ್ಗೆ ಯಾವುದೇ ಕೇಸು, ಎಫ್ ಐ ಆರ್ ದಾಖಲಾಗಿಲ್ಲ, ಯಾವುದೇ ತನಿಖೆಗೂ ಆದೇಶ ನೀಡಿಲ್ಲ!!

1993ರ ಜನವರಿಯಲ್ಲಿ ಫೈಝಾಬಾದಿನಿಂದ ನಿಯೋಗವೊಂದು ಅಂದಿನ ಪ್ರಧಾನ ಮಂತ್ರಿ ಪಿ.ವಿ. ನರಸಿಂಹ ರಾವ್ ರನ್ನು ಭೇಟಿ ಮಾಡಿ ಅಯೋಧ್ಯೆ ನರಮೇಧದ ಬಗ್ಗೆ ವರದಿಯನ್ನು ಸಲ್ಲಿಸಿ, ಕೇಸು ದಾಖಲಿಸಿ ತನಿಖೆಗೆ ಆದೇಶ ನೀಡುವಂತೆ ವಿನಂತಿಸಿತು. ಆದರೆ, ಇದುವರೆಗೂ ಯಾವುದೇ ಕೇಸು ದಾಖಲಾಗಿಲ್ಲ, ಅದೇ ರೀತಿ ಯಾವುದೇ ತನಿಖೆಗೂ ಆದೇಶ ನೀಡಿಲ್ಲ.

ವರದಿಯ ಮಾಹಿತಿಯನ್ನಾದರಿಸಿ, ಹತ್ಯೆಗೀಡಾದವರ ಪರಿವಾರಕ್ಕೆ ತಲಾ ಎರಡು ಲಕ್ಷ ರೂಪಾಯಿಗಳನ್ನು ನೀಡಲು ಸರಕಾರ ಆದೇಶ ನೀಡಿತು. ಮನೆ ನಷ್ಟಗೊಂಡವರಿಗೂ ಪರಿಹಾರ ಧನ ಒದಗಿಸಲಾಗಿತ್ತು.

ಫೈಝಾಬಾದ್ ನಿಯೋಗದ ನಾಯಕ ಕ್ಯಾಪ್ಟನ್ ಅಫ್ಝಲ್ ಅಹ್ಮದ್ ಖಾನ್ ಪ್ರಕಾರ ಡಿಸೆಂಬರ್ 6ರಂದು ಫೈಝಾಬಾದಿನ ಹಲವರು ಪ್ರಧಾನ ಮಂತ್ರಿ ಕಚೇರಿ ಹಾಗೂ ಕೇಂದ್ರ ಸಚಿವರಾಗಿದ್ದ ಗುಲಾಂ ನಬಿ ಆಝಾದ್, ಸಿ.ಕೆ. ಜಾಫರ್ ಶರೀಫ್, ಅರ್ಜುನ್ ಸಿಂಗ್ ಹಾಗೂ ಜಿತೇಂದ್ರ ಪ್ರಸಾದ್ ರನ್ನು ಸಂಪರ್ಕಿಸಿ ಸಹಾಯವನ್ನು ಕಳುಹಿಸಿ ನರಮೇಧ ನಿಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ ಮರು ದಿನವೂ ನರಮೇಧ ಹಾಗೂ ಆಸ್ತಿ ಹಾನಿ ಮುಂದುವರಿದಿತ್ತು.

ಇಂದು ನಮ್ಮಲ್ಲಿ ಹಲವರು ತಿಳಿದೇ ಇಲ್ಲದ, ಆಡಳಿತದಲ್ಲಿದ್ದವರು ಕಡೆಗಣಿಸಿದ ಈ ನರಮೇಧವು, ಅಂದು ತಮ್ಮ ಪರಿವಾರದವರನ್ನು, ಮನೆಯನ್ನು ಕಳೆದುಕೊಂಡು ಬದುಕುಳಿದ ಹಲವು ಮುಸ್ಲಿಮರನ್ನು ಇಂದೂ ಕಾಡುತ್ತಿದೆ.

ಕೃಪೆ: The Wire

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group