ವರದಿಗಾರ(06.12.2017) : 420 ವರ್ಷಗಳಿಂದಲೂ ಅಧಿಕ ಕಾಲ ಮುಸ್ಲಿಮರಿಂದ ಆರಾಧನೆಗೆ ಬಳಸಲ್ಪಡುತ್ತಿದ್ದ ಮಸೀದಿಯನ್ನು ಧ್ವಂಸಗೊಳಿಸುವ ಮೂಲಕ ದೇಶ ಎತ್ತಿಹಿಡಿದ ಆದರ್ಶ ಮತ್ತು ಮೌಲ್ಯಗಳೇ ದ್ವಂಸಗೊಂಡಿದ್ದವು ಈ ವಿಧ್ವಂಸಕ ಕೃತ್ಯದ ಪ್ರಮುಖ ಆರೋಪಿಗಳು ಆರ್ ಎಸ್ ಎಸ್, ವಿ.ಎಚ್.ಪಿ, ಹಾಗೂ ಬಿ.ಜೆ.ಪಿ ನಾಯಕರಾಗಿದ್ದು. ಇದು ನಡೆದು 25 ವರ್ಷಗಳು ಕಳೆದಿವೆ. ಮಸೀದಿಯನ್ನು ಅದೇ ಜಾಗದಲ್ಲಿ ಪುನರ್ ನಿರ್ಮಿಲಾಗುವುದು ಎಂದು ಸರಕಾರ ರಾಷ್ಟ್ರಕ್ಕೆ ನೀಡಿದ ಭರವಸೆ ಇನ್ನೂ ಈಡೆರಿಸಿಲ್ಲ. ಮಸೀದಿಯ ಪುನರ್ ನಿರ್ಮಾಣ ಮತ್ತು ಅಪರಾಧಿಗಳನ್ನು ಶಿಕ್ಷಿಸುವುದು ಮಾತ್ರವೇ ಗಣರಾಜ್ಯದ ಬಗ್ಗೆ ಜನರ ನಂಬಿಕೆಯನ್ನು ಪುನಃಸ್ಥಾಪಿಸಲು ಇರುವ ಹಾದಿ ಎಂದು ಆ ಸಂದರ್ಭದಲ್ಲಿ ಬುದ್ದಿಜೀವಿಗಳು, ಜಾತ್ಯಾತೀತ ನಾಯಕರು ಮತ್ತು ಮಾಧ್ಯಮಗಳು ಹೇಳಿದ್ದವು. ಆದರೆ ಇದುವರೆಗೆ ಆದು ಈಡೇರಿಲ್ಲ. ಆದರೆ ವಿರ್ಪಯ್ಯಾಸವೆಂದರೆ 1992 ರಲ್ಲಿ ದ್ವಂಸದ ಆರೋಪಿಗಳ ವಿರುದ್ದ ಪ್ರಕರಣಗಳು ದಾಖಲಾಗಿದ್ದರೂ ಅವರು ಶಿಕ್ಷೆಯ ಯಾವುದೇ ಭಯವಿಲ್ಲದೇ ಸ್ವತಂತ್ರವಾಗಿ ಆಲೆದಾಡುತ್ತಿದ್ದಾರೆ. ಧ್ವಂಸದ ಎಲ್ಲಾ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವ ಮೂಲಕ ಜನರಲ್ಲಿ ಪ್ರಜಾಸತ್ತೆಯ ಮೇಲೆ ಭರವಸೆಯನ್ನು ಪುನಃಸ್ಥಾಪಿಸಬೇಕೆಂದು ಧ್ವಂಸದ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಲಿಬರ್ಹಾನ್ ಆಯೋಗದ ವರದಿಯಲ್ಲಿ ಆರೋಪಿಸಲಾಗಿರುವ ಎಲ್ಲಾ ಆಪರಾಧಿಗಳ ವಿರುದ್ದ ಸರಕಾರ ಕಾನೂನು ಕ್ರಮ ಕ್ಯೆಗೊಳ್ಳಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಬೆಳ್ತಂಗಡಿ ತಾಲ್ಲೂಕು ಸಮಿತಿ ಒತ್ತಾಯಿಸುತ್ತದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ಬಾಬರಿ ಮಸ್ಜಿದ್ ಪುನರ್ ನಿರ್ಮಾಣದ ಕುರಿತು ಗೌರವಾನ್ವಿತ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಇಂದು ಮನವಿ ಸಲ್ಲಿಸಲಾಯಿತು
ವರದಿ : ಹಾರಿಸ್ ಹನೀಫಿ
