ಬಜಪೆ : ಸುನ್ನೀ ಯುವಜನ ಸಂಘ ಎಸ್ವೈಎಸ್ ಬಜಪೆ ಸೆಂಟರ್ ಇದರ ಅಧೀನದಲ್ಲಿ ದಅವಾ ಸೆಂಟರ್ ಕಚೇರಿ ಉದ್ಘಾಟನಾ ಸಮಾರಂಭವು ಶುಕ್ರವಾರ ಬಜಪೆಯಲ್ಲಿ ನಡೆಯಿತು. ಮರ್ಕಝ್ ಕೈಕಂಬ ಇದರ ಚೇರ್ಮೆನ್ ಬದ್ರುದ್ದೀನ್ ಅಝ್ಹರಿ ಅಲ್ ಕಾಮಿಲ್ ದಅವಾ ಸೆಂಟರ್ ಉದ್ಘಾಟಿಸಿದರು. ಎಸ್ವೈಎಸ್ ಬಜ್ಪೆ ಸೆಂಟರ್ ಅಧ್ಯಕ್ಷ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನೂತನ ಕಚೇರಿಯಲ್ಲಿ ಬ್ರೀಝ್ ಆಫ್ ಮದೀನ ತಂಡದ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ನಡೆಯಿತು. ಬಜ್ಪೆ ಎಂಜೆಎಂ ಮುದರ್ರಿಸ್ ಅಬ್ದುಲ್ಲಾ ಅಹ್ಸನಿ ದುಆಶಿರ್ವಚನ ಮಾಡಿದರು. ವೇದಿಕೆಯಲ್ಲಿ ಎಸ್ವೈಎಸ್ ಜಿಲ್ಲಾ ಕಾರ್ಯದರ್ಶಿ ಸಲೀಲ್ ಹಾಜಿ, ಸೆಂಟರ್ ಎಸ್ವೈಎಸ್ ಮುಖಂಡರಾದ ಅಹ್ಮದ್ ಹುಸೈನ್ ಶಾಫಿ, ಬಶೀರ್ ಅಲ್ ರಫಾ, ಎಂಹೆಚ್ ಹನೀಫ್ ಕಿನ್ನಿಪದವು, ಇಸ್ಮಾಯಿಲ್ ಉಂಞಿ ಹಾಜಿ ಬಜ್ಪೆ, ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಅಧ್ಯಕ್ಷರಾದ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ, ಸೆಕ್ಟರ್ ಉಪಾಧ್ಯಕ್ಷ ಇಸ್ಮಾಈಲ್ ಬಜ್ಪೆ, ಕೋಶಾಧಿಕಾರಿ ರಮೀಝ್ ತಾರಿಕಂಬಳ, ಮುಂತಾದವರು ಉಪಸ್ಥಿತರಿದ್ದರು. ಎಸ್ವೈಎಸ್ ಮಂಗಳೂರು ಝೋನಲ್ ಉಪಾಧ್ಯಕ್ಷ ಹಮೀದ್ ಬಜ್ಪೆ ಸ್ವಾಗತಿಸಿ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಕಾರ್ಯದರ್ಶಿ ಎಂಎ ಸಿದ್ದೀಖ್ ಬಜ್ಪೆ ಧನ್ಯವಾದವಿತ್ತರು.
ವರದಿ : ಶಾಕಿರ್ ಎಮ್ಮೆಸ್ಸಿ
