ಅನಿವಾಸಿ ಕನ್ನಡಿಗರ ವಿಶೇಷ

ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯ ಪೌರನಿಗೆ ನೆರವಾದ ಇಂಡಿಯನ್ ಸೋಶಿಯಲ್ ಫೋರಂ

ಅಲ್ ಹಸ್ಸಾ (06.12.2017) : ಸೌದಿ ಅರೆಬಿಯಾದಲ್ಲಿ ಒಳ್ಳೆಯ ಕೆಲಸ ಕೈ ತುಂಬ ಸಂಬಳ ಕೊಡಿಸುವುದಾಗಿ ಹೇಳಿ ವೀಸಾ ಏಜೆಂಟ್ ಮಾತಿಗೆ ಮೋಸ ಹೋಗಿ ಸೌದಿ ಅರೆಬಿಯಾದ ಅಲ್ ಹಸ್ಸಾ ಎಂಬಲ್ಲಿಗೆ ಬಂದು ಕಳೆದ 8 ತಿಂಗಳುಗಳಿಂದ ಕೆಲಸವೂ ಇಲ್ಲದೆ ವಾಸಿಸಲು ಸರಿಯಾದ ವಸತಿಯೂ ಇಲ್ಲದೆ ಸರಿಯಾದ ದಾಖಲೆಗಳೊಂದಿಗೆ ಊರಿಗೂ ಹೋಗಲೂ ಸಾಧ್ಯವಾಗದೆ ಕಂಗಾಲಾಗಿದ್ದ ಉತ್ತರ ಪ್ರದೇಶದ ಸಗೀರ್ ಅಹ್ಮದ್ ಎಂಬ ಯುವಕನನ್ನು ಅಲ್ ಹಸ್ಸಾ ಇಂಡಿಯನ್ ಸೋಶಿಯಲ್ ಫೋರಂ  ನೆರವಿನಿಂದ ಇಲ್ಲಿನ ಕಾನೂನು ಅಡಿಯಲ್ಲಿ  ಊರಿಗೆ ಮರಳಿಸುವಲ್ಲಿ ಸಫಲವಾಗಿದೆ.

ದುಬಾರಿ ಹಣವನ್ನು ನೀಡಿಯೂ ಮೋಸ ಹೋದ ಯುವಕನ ಸಂಕಷ್ಟವನ್ನು ಕಂಡವರು ಇಂತಹ ಬಹಳಷ್ಟು ಪ್ರಕರಣಗಳನ್ನು ಕೈಗೆತ್ತಿ ನ್ಯಾಯ ದೊರಕಿಸುವ ಸ್ಥಳೀಯ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರಿಗೆ ತಿಳಿಸಿದ್ದಾರೆ. ಇದನ್ನರಿತ ಅಲ್ ಹಸ್ಸಾ ಇಂಡಿಯನ್ ಸೋಶಿಯಲ್ ಫೋರಂ ಅಧ್ಯಕ್ಷರಾದ ಅಬ್ದುಲ್ ಖಾದರ್ ಮರವೂರ್, ಕಾರ್ಯದರ್ಶಿ ಮುಹಮ್ಮದ್ ರಫೀಕ್ ಬುಡೋಳಿ ಹಾಗೂ ಮುಹಮ್ಮದ್ ಕಲ್ಲಾಪುರವರು ತಕ್ಷಣ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ಬೇಟಿಯಾಗಿ ಊರಿಗೆ ಮರಳಿಸುವ ಭರವಸೆಯನ್ನು ನೀಡಿ ಕಾರ್ಯಪ್ರವೃತ್ತರಾಗಿದ್ದರು.

ತಮ್ಮ ಕೆಲಸದ ಮಧ್ಯೆಯೂ ಭಾರತೀಯ ಪೌರನ ರಕ್ಷಣೆಗೆ ಪಣತೊಟ್ಟು ಭಾರತೀಯ ರಾಯಭಾರಿ ಕಛೇರಿಯ ಅಧಿಕೃತ ಪತ್ರವನ್ನು ಪಡೆದು ಸಂತ್ರಸ್ತ ವ್ಯಕ್ತಿಯ ಪ್ರಾಯೋಜಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿಷಯದ ಗಂಭೀರತೆಯ ಬಗ್ಗೆ ಪ್ರಾಯೋಜಕರಿಗೆ ಮನದಟ್ಟು ಮಾಡಿಕೊಡುತ್ತಾ ಸಂತೃಸ್ತನನ್ನು ವಾಪಾಸ್ ಕಳುಹಿಸಲು ಸಾಧ್ಯವಿಲ್ಲದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಹಿಂಜರಿಯಲಾರೆವು ಎಂಬ ವಿಷಯವನ್ನು  ಪ್ರಸ್ತಾವಿಸಿದಾಗ ತಮ್ಮ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಪ್ರಾಯೋಜಕರು ಸಂತ್ರಸ್ತ ವ್ಯಕ್ತಿಯನ್ನು ಊರಿಗೆ ಹೋಗಲು ಸಹಕಾರ ನೀಡುವ ಭರವಸೆಯಿತ್ತರು.

ನಂತರ ಪ್ರಾಯೋಜಕರನ್ನು ಬೆಂಬಿಡದೆ ನಿರಂತರವಾಗಿ ಬೆನ್ನು ಹತ್ತಿದ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರು ಕೊನೆಗೂ ಸಂತ್ರಸ್ತ ವ್ಯಕ್ತಿಯನ್ನು ಊರಿಗೆ ಮರಳಿಸುವಲ್ಲಿ ಸಫಲವಾಯಿತು. ಸಮಾರು 8 ತಿಂಗಳಿನವರೆಗೆ ಕೊರಗುತ್ತಿದ್ದ ತನ್ನ ಮುಖದಲ್ಲಿ  ಮಂದಹಾಸ ಮೂಡಿಸಲು ಸತತವಾಗಿ ಪ್ರಯತ್ನಪಟ್ಟ  ಇಂಡಿಯನ್ ಸೋಶಿಯಲ್ ಫೋರಂ ನ ಕಾರ್ಯಕ್ಷಮತೆಗೆ ಸಗೀರ್ ಅಹ್ಮದ್ ಮತ್ತು ಅವರ ಕುಟುಂಬಸ್ತರು ಹೃದಯಾಂತರಾಳದ ಧನ್ಯವಾದವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವಾರವಷ್ಟೇ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರ ಅವಿರತ ಶ್ರಮದ ಫಲವಾಗಿ ಮಂಗಳೂರು ಮೂಲದ ವಿಜಯಾ ಎಂಬ ಮಹಿಳೆಯನ್ನು ಸಂಬಳ ನೀಡದೆ ಸತಾಯಿಸುತ್ತಿದ್ದ ಪ್ರಾಯೋಜಕನ ಕಪಿಮುಷ್ಟಿಯಿಂದ ಪಾರುಮಾಡಿಸಿ, ಮರಳಿ ಭಾರತಕ್ಕೆ ಕಳುಹಿಸಿದ್ದ ಘಟನೆ ವರದಿಯಾಗಿತ್ತು. ತಮ್ಮ ಕುಟುಂಬವನ್ನು ಸಲಹುವ ಉದ್ದೇಶದಿಂದ ಮರಳುಗಾಡಿಗೆ ಬಂದಿರುವ ಐ ಎಸ್ ಎಫ್ ಸದಸ್ಯರು, ತಮ್ಮ ಬಿಡುವಿಲ್ಲದ ಶ್ರಮದ ಜೀವನದ ಮಧ್ಯೆ ಸಂಕಷ್ಟಕ್ಕೊಳಗಾಗುವವರಿಗೆ ಮಿಡಿಯುವ ಹೃದಯ ವೈಶಾಲ್ಯತೆ ಇದೀಗ ಅನಿವಾಸಿ ಭಾರತೀಯರೂ ಸೇರಿದಂತೆ ಎಲ್ಲರ ಮನ ಗೆಲ್ಲುವಲ್ಲಿ ಸಫಲವಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group