ವರದಿಗಾರ (06.12.2017) : ಉಮ್ರಾ ನಿರ್ವಹಿಸಲು ಮಂಗಳೂರು ಟೂರ್ಸ್ ಅಂಡ್ ಟ್ರಾವೆಲ್ಸ್ ಮೂಲಕ ಪವಿತ್ರ ಮಕ್ಕಾಗೆ ಆಗಮಿಸಿದ್ದ ಬಂಟ್ವಾಳ ತಾಲೂಕು ಮಾಣೂರ್ ನಿವಾಸಿ ಹುಸನಬ್ಬ ಎಂಬವರು ಹೃದಯ ವೈಫಲ್ಯದಿಂದ ಮಕ್ಕಾದ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.ಮೃತರ ದಫನ ಕ್ರಿಯೆ ಮಕ್ಕಾದಲ್ಲಿಯೇ ನಡೆಸಬೇಕೆಂಬ ಕುಟುಂಬಿಕರ ಅಭಿಲಾಷೆಯಂತೆ,ಮಕ್ಕದಲ್ಲಿಯೇ ದಫನ ಮಾಡುವುದೆಂದು ನಿರ್ಧರಿಸಿ ಮೃತರ ದಫನ ಕ್ರಿಯೆಗೆ ಬೇಕಾದ ಪೂರ್ಣ ಅಧಿಕಾರವನ್ನು ಅವರನ್ನು ಕರೆ ತಂದ ಟ್ರಾವೆಲ್ಸ್ ಮಾಲೀಕ ಹಾಜಿ ಅಬೂಬಕ್ಕರ್ ರವರಿಗೆ ನೀಡಲಾಯಿತು.ಮೃತರ ದಫನ ಕ್ರಿಯೆಗೆ ಬೇಕಾದ ಎಲ್ಲ ದಾಖಲೆ ಪತ್ರಗಳ ಸಂಗ್ರಹಕ್ಕೆ ಅಬೂಬಕ್ಕರ್ ರವರಿಗೆ ಇಂಡಿಯನ್ ಸೋಶಿಯಲ್ ಫೋರಮ್ ಮಕ್ಕಾ ಘಟಕ ಕಾರ್ಯದರ್ಶಿ ಬಷೀರ್ ಪೊರ್ಕೋಡಿ ,ಅಶ್ರಫ್ ಬಜ್ಪೆ ಜೆದ್ದಾ,ಮುಹಮ್ಮದ್ ಅಲಿ ಮೂಳೂರು ಸಹಕಾರ ನೀಡಿದರು.ಮಕ್ಕಾದ ಪವಿತ್ರ ಹರಮ್ ನ ಸಮೀಪದ ಜನ್ನಾತುಲ್ ಮೊಹಲ್ಲಾದಲ್ಲಿ ಮೃತರ ದಫನ ಕ್ರಿಯೆ ನಡೆಸಲಾಯಿತು.ಮೃತರಿಗಾಗಿ ತಲ್ಕೀನ್ ಪಾರಾಯಣವನ್ನು ಅಲ್ ಸಬೀಲ್ ಉಮ್ರಾ ಗ್ರೂಪ್ ಮಾಲಕ ಉಸ್ಮಾನ್ ಸ ಅ ದಿ ಪಟ್ಟೋರಿ ನಡೆಸಿದರು,ದುಆ ವನ್ನು ಹಂಝ ಮದನಿ ಮಿತ್ತೂರು ನೆರವೇರಿಸಿದರು.ಅಂತ್ಯ ಕ್ರಿಯೆಯಲ್ಲಿ, ಸುನ್ನಿ ಸೆಂಟರ್ ಕಾರ್ಯದರ್ಶಿ ರಶೀದ್ ಉಪ್ಪಿನಂಗಡಿ ಹಾಗು ಸದಸ್ಯರು,ಇಂಡಿಯಾ ಫ್ರಟೆರ್ನಿಟಿ ಫೋರಮ್ ಕಾರ್ಯದರ್ಶಿ ಹೈದರ್ ಅಲಿ ಕೊಣಾಜೆ,ಉಬೈದುಲ್ಲಾ ಬಂಟ್ವಾಳ,ಇಂಡಿಯಾ ಸೋಶಿಯಲ್ ಫೋರಮ್ ಅಧ್ಯಕ್ಷ ಮಜೀದ್ ವಿಟ್ಲಾ,ಹಮೀದ್ ಫಜೀರ್ ಹಾಗು ಸದಸ್ಯರು ಉಪಸ್ಥಿತರಿದ್ದರು.
ವರದಿ:ಎಸ್ ಎಚ್ ಬ್ಯಾರಿ ನೆಲ್ಯಾಡಿ
