ಜಿಲ್ಲಾ ಸುದ್ದಿ

ಗುಂಪು ಹಿಂಸೆಯನ್ನು ಪ್ರತಿರೋಧಿಸೋಣ: ಇಂದು ಗುರುಪುರ ಕೈಕಂಬದಲ್ಲಿ SDPI ಸಮಾವೇಶ

ವರದಿಗಾರ-ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಗುಂಪು ಹಿಂಸಾ ಹತ್ಯೆಯ ವಿರುದ್ಧದ ಅಭಿಯಾನದ ಅಂಗವಾಗಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಇಂದು ಸಂಜೆ 4.30ಕ್ಕೆ ಗುರುಪುರ-ಕೈಕಂಬ ಜಂಕ್ಷನ್ ನಲ್ಲಿ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ದೇಶದ ವಿವಿದೆಡೆ ಗುಂಪು ಹತ್ಯೆ ಯಿಂದ ಸಂತ್ರಸ್ತರಾದ ಬಹುತೇಕ ಕುಟುಂಬಗಳನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಕಲೆ ಹಾಕಿರುವ  SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಇಲ್ಯಾಸ್ ಮುಹಮ್ಮದ್ ಭಾಗವಹಿಸಲಿದ್ದು ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಜಮಾಲ್ ಜೋಕಟ್ಟೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ PFI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಇಕ್ಬಾಲ್ ನಂದರಬೆಟ್ಟು,ಉಡುಪಿಯ ಕ್ರೈಸ್ತ ಧರ್ಮ ಗುರುಗಳಾದ ಫಾ! ವಿಲಿಯಮ್ ಮಾರ್ಟಿಜ್,ಅಹಿಂದ ಪರ ಹೋರಾಟಗಾರರಾದ ಸತೀಶ್ ಸಾಲಿಯಾನ್,SDPI ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಂ ಅಥಾವುಲ್ಲಾ, PFI ದ.ಕ ಜಿಲ್ಲಾಧ್ಯಕ್ಷರಾದ ನವಾಜ್ ಉಳ್ಳಾಲ್, SDPI ದ.ಕ.ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ,PFI ಬಜ್ಪೆ ವಲಯಾಧ್ಯಕ್ಷರಾದ ಎ.ಕೆ.ಅಶ್ರಫ್,PFI ಮೂಡಬಿದ್ರೆ ವಲಯಾಧ್ಯಕ್ಷರಾದ ಅಬೂಬಕ್ಕರ್ ಪುತ್ತ ವಾಮಂಜೂರ್ ಬಾಗವಹಿಸಲಿದ್ದಾರೆ ಎಂದು SDPI ಮುಲ್ಕಿ ಮೂಡಬಿದ್ರೆ ಕಾರ್ಯದರ್ಶಿ ನಿಸ್ಸಾರ್ ಮರವೂರ್ ತಿಳಿಸಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group