ವರದಿಗಾರ (05.12.2017): ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪ್ರತಕರ್ತೆ ಗೌರಿ ಲಂಕೇಶ್ ಹತ್ಯಾ ಹಂಕತರನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನ ಮೌರ್ಯವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ, ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
‘ಗೌರಿ ಹಂತಕರ ಪತ್ತೆಗೆ ಇನ್ನೇಷ್ಟು ದಿನ ಬೇಕು? ಎಂಬ ಘೋಷಣೆಯೊಂದಿಗೆ ಹಂತಕರನ್ನು ಬಂಧಿಸಬೇಕು ಎಂದು ಪ್ರತಿಭಟನಾ ನಿರತ ಪ್ರಗತಿಪರರು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.ಕೆ.ಎಲ್.ಅಶೋಕ್, ಯೋಗೇಶ್ ಮಾಸ್ಟರ್ ಇನ್ನಿತತರು ಉಪಸ್ಥಿತರಿದ್ದರು.
ಮಕ್ಕಳಾದ ದೇವಿ ಮತ್ತು ಕೈವಲ್ಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
