ಮಂಗಳೂರು (4.12.2017): ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲರಕೋಡಿ ಹಳೆವಿದ್ಯಾರ್ಥಿ ಸಂಘ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಯೇನಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇದರ ಸಹಯೋಗದೊಂದಿಗೆ ದಿನಾಂಕ: 3-12-2017 ಆದಿತ್ಯವಾರದಂದು ಕೊಲ್ಲರಕೋಡಿ ಶಾಲಾ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರವು ಬಹಳ ವಿಜೃಂಭಣೆಯಿಂದ ನಡೆಯಿತು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ನರಿಂಗಾನ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರೆ, ಉದ್ಯಮಿ ಮುಸ್ತಾಫ ಎಸ್.ಎಂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಮಂಗಳೂರು ವಿದಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚ್ ಮುಖಂಡರಾದ ಡಾ. ಮುನೀರ್ ಬಾವ, ಅಸ್ಗರ್ ಅಲಿ ಮುಡಿಪು, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಾಕೋಡಿ, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಉರ್ಣಿ ಮಂಜೇಶ್ವರ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ, ಯೆನೆಪೋಯ ಕಾಲೇಜಿನ ಡಾ. ರೇಣುಕ, ಡಾ. ಗಾಝಾನಾ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಿದ್ದೀಕ್ ಪಾರೆ, ಗೌರವ ಸಲಹೆಗಾರ ಪೇಮಾನಂದ ರೈ, ಕೋಶಾಧಿಕಾರಿ ವಿಜಾಯನಂದ ರೈ, sಸಂಘಟನಾ ಕಾರ್ಯದರ್ಶಿ ಅಶ್ರಫ್ ಎಸ್.ಎಚ್, ಕಾರ್ಯದರ್ಶಿ ಚೇತಾನ್ ಶೆಟ್ಟಿ, ಜೆಡಿಎಸ್ ಮುಖಂಡ ಮೊೈದೀನ್ ಸಿಹಾಬ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಐವತ್ತಕ್ಕೂ ಹೆಚ್ಚು ಉತ್ಸಾಹಿ ಯುವಕರು ರಕ್ತದಾನ ಮಾಡಿ ಸಹಕರಿಸಿದರು.
ರಕ್ತ ಅಗತ್ಯ ಬಂದಾಗ ವಿಶೇಷ ಸೇವೆ ನೀಡಿದ ಯೆನೆಪೋಯ ಅಸ್ಪತ್ರೆಯ ಕೆ.ಶಾನಿ ಪಿ. ಸಾಜಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಲೋಗೋ ಹೊಂದಿದ ಆಟಗಾರರ ಯುನಿಫಾರ್ಮ್ ಈ ಸಂಧರ್ಭದಲ್ಲಿ ಬಿಡುಗಡೆ ಮಾಡಲಾಯಿತು..
ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿವೇಕಾನಂದ ರೈ ಸ್ವಾಗತಿಸಿದರು. ಅಧ್ಯಕ್ಷ ನವಾಝ್ ನರಿಂಗಾನ ವಂದಿಸಿದರು.
ವರದಿ : ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು
