ವರದಿಗಾರ (04.12.2017) : ಗುಜರಾತಿನ ಭರೂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಚುನಾವಣಾ ಸಭೆಯಲ್ಲಿ ಸಭಿಕರಿಲ್ಲದೇ ಭಣಗುಡುತ್ತಿರುವ ದೃಶ್ಯಗಳ ವೀಡಿಯೋ ಒಂದನ್ನು ‘ಎ ಬಿ ಪಿ ನ್ಯೂಸ್’ ಚಾನೆಲಿನ ಪತ್ರಕರ್ತ ಜೈನೇಂದ್ರ ಕುಮಾರ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದರು. ವೀಡಿಯೋದಲ್ಲಿ ಮೋದಿ ಭಾಷಣ ಮಾಡುತ್ತಿರುವ ಸಮಯದಲ್ಲಿ ಮೈದಾನದಲ್ಲಿ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿದ್ದವು. ಇದೀಗ ಆ ವೀಡಿಯೋವನ್ನು ಪೋಸ್ಟ್ ಮಾಡಿದ್ದ ಜೈನೇಂದ್ರ ಕುಮಾರ್ ವಿರುದ್ಧ ಬಿಜೆಪಿ ಕಾರ್ಯಕರ್ತನೋರ್ವ ಟ್ವಿಟ್ಟರ್’ನಲ್ಲಿ ಕೊಲೆ ಮಾಡಬೇಕೆಂದು ಬೆದರಿಕೆ ಹಾಕಿದ್ದಾನೆ.
ಪತ್ರಕರ್ತ ಜೈನೇಂದ್ರ ಕುಮಾರ್ ಮೋದಿಯ ಚುನಾವಣಾ ಭಾಷಣದ ವರದಿ ಮಾಡುತ್ತಾ, ‘ಇಂದಿನ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ನಿಗದಿಯಾಗಿತ್ತು. ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ಸಭಿಕರು ಸೇರದಿದ್ದರಿಂದಾಗಿ ನರೇಂದ್ರ ಮೋದಿಯವರು ಮದ್ಯಾಹ್ನ ಒಂದು ಗಂಟೆಗೆ ಬಂದು ತನ್ನ ಭಾಷಣ ಪ್ರಾರಂಭಿಸಿದ್ದಾರೆ. ಆದರೂ ಮೈದಾನದಲ್ಲಿ ಬಿಜೆಪಿ ಹಾಕಿದ್ದ ಕುರ್ಚಿಗಳೆಲ್ಲವೂ ಭರ್ತಿಯಾಗಿರಲಿಲ್ಲವೆಂದು ಮೈದಾನದಾದ್ಯಂತ ತನ್ನ ಕ್ಯಾಮರಾ ಕಣ್ಣನ್ನು ಓಡಿಸುತ್ತಾರೆ. ಅರ್ಧದಷ್ಟೂ ಕುರ್ಚಿಗಳು ಭರ್ತಿಯಾಗದ ದೃಶ್ಯಗಳು ವೀಡಿಯೋದಲ್ಲಿ ಕಂಡು ಬಂದಿತ್ತು. ಸಂಪೂರ್ಣ ಮೈದಾನ ಖಾಲಿಯಾಗಿತ್ತು ಮಾತ್ರವಲ್ಲ ಬಂದ ಜನರೂ ಅರ್ಧದಲ್ಲೇ ಸಭೆಯಿಂದ ಎದ್ದು ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿದ್ದವು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುತೇವೆಂದು ಹೇಳುತ್ತಿರುವ ಮೋದಿಯವರ ಸಭೆಗಳಲ್ಲೇ ಜನರ ಈ ರೀತಿಯ ಪ್ರತಿಕ್ರಿಯೆ ಕಂಡು ರಾಜ್ಯ ಬಿಜೆಪಿ ಚಿಂತಾಕ್ರಾಂತವಾಗಿದೆ ಎನ್ನಲಾಗಿದೆ. ತಮ್ಮ ಸಭೆಗಳಲ್ಲೇ ಜನರನ್ನು ತುಂಬಿಸಲಾಗದವರು ಅದು ಹೇಗೆ ವಿಧಾನಸಭೆಯಲ್ಲಿ 150 ಸೀಟುಗಳನ್ನು ಜಯಿಸುತ್ತಾರೆ ಎಂದು ಜೈನೇಂದ್ರ ಕುಮಾರ್ ವೀಡಿಯೋದಲ್ಲಿ ಪ್ರಶ್ನಿಸಿದ್ದಾರೆ.
‘ನಿಮ್ಮಂತಹವರನ್ನು ಶೂಟ್ ಮಾಡಿ ಕೊಲ್ಲಬೇಕು’ !!
ತನ್ನ ಟ್ವಿಟ್ಟರ್ ಪೋಸ್ಟ್ ಗೆ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್’ರವರ ಆರ್ಥಿಕ ನೀತಿಯನ್ನು ವಿಮರ್ಶಿಸಿದ್ದ ಟ್ವೀಟ್’ಗೆ ಉತ್ತರಿಸಿದ್ದ ಅಶೋಕ್ ಕುಮಾರ್ ಎನ್ನುವ ಬಿಜೆಪಿಯ ಕಾರ್ಯಕರ್ತನೋರ್ವ “ನಿಮ್ಮನ್ನೆಲ್ಲಾ ಶೂಟ್ ಮಾಡಿ ಕೊಲ್ಲಬೇಕು” ಎಂದು ಬೆದರಿಕೆ ಹಾಕಿದ್ದಾನೆ. ಆತನ ಬೆದರಿಕೆ ಟ್ವೀಟನ್ನು ‘ಆಜ್ ತಕ್ ಮತ್ತು ಇಂಡಿಯಾ ಟುಡೇಯ’ ಪತ್ರಕರ್ತರಾಗಿರುವ ಅಶುತೋಷ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಬೆದರಿಕೆ ಹಾಕಿರುವ ಅಶೋಕ್ ಕುಮಾರ್ ವೃತ್ತಿಯಲ್ಲಿ ಡಾಕ್ಟರ್ ಎಂದು ತನ್ನ ವೈಯುಕ್ತಿಕ ಪರಿಚಯ ವಿಭಾಗದಲ್ಲಿ ಬರೆದುಕೊಂಡಿದ್ದಾನೆ
ಜೈನೇಂದ್ರ ಕುಮಾರ್ ಟ್ವೀಟ್
गुजरात में BJP प्रधानमंत्री मोदी की चुनावी रैलियों में कुर्सी नहीं भर पा रही है, विधानसभा में 150 कुर्सी कैसे भरेगी?
(जम्बुसर, भरूच की तस्वीर) pic.twitter.com/TbpMlaZPiy
— जैनेन्द्र कुमार (@jainendrakumar) December 3, 2017
ಬೆದರಿಕೆಯ ಟ್ವೀಟ್
A BJP worker openly threatens ABP journalist @jainendrakumar just coz the reporter shared report of empty chairs in Modi’s rally. https://t.co/3VBX91Kq0M
— ASHUTOSH MISHRA (@ashu3page) December 4, 2017
ಮೋದಿಯ ಸಭೆಯಲ್ಲಿ ಖಾಲಿ ಕುರ್ಚಿಗಳು ಎದ್ದು ಕಾಣುತ್ತಿರುವುದು
