ರಾಜ್ಯ ಸುದ್ದಿ

ಪ್ರತಾಪ್ ಸಿಂಹ ಎಂಬ ಹುಚ್ಚನನ್ನು ಹುಚ್ಚಾಸ್ಪತ್ರೆಗೆ ಕರೆದೊಯ್ಯಬೇಕು: ಬಿಜೆಪಿಗೆ ವಿನಯ ಕುಲಕರ್ಣಿ ಸಲಹೆ

ವರದಿಗಾರ (04.12.2017): ಸಂಸದ ಪ್ರತಾಪ್‌ ಸಿಂಹ ಒಬ್ಬ ಹುಚ್ಚ, ಬಿಜೆಪಿಯವರು ಮೊದಲು ಆತನನ್ನು ಹುಚ್ಚಾಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು  ಸಚಿವ ವಿನಯ ಕುಲಕರ್ಣಿ ಸಲಹೆ ನೀಡಿ, ಲೇವಡಿ ಮಾಡಿದ್ದಾರೆ.

ವಿನಯ ಕುಲಕರ್ಣಿ ಇಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರ ವ್ಯಕ್ತಿತ್ವ ಜನತೆಗೆ ತಿಳಿಯುತ್ತಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಒನಕೆ ಓಬವ್ವ, ಚೆನ್ನಮ್ಮಗೆ ಅವಮಾನ ಮಾಡಿದಾಗಲೂ ಬಿಜೆಪಿ ನಾಯಕರಾರು ಮಾತನಾಡಲೇ ಇಲ್ಲ. ಒಂದು ವೇಳೆ ಬೇರೆ ಪಕ್ಷದವರಾದರೂ ಈ ತರಹ ಮಾಡಿದ್ದರೆ ಈಗಾಗಲೇ ಮುತ್ತಿಗೆ, ಪ್ರತಿಭಟನೆಗಳನ್ನು ರಾಜ್ಯಾದ್ಯಂತ ಬಿಜೆಪಿಗರು ಮಾಡುತ್ತಾ ಇದ್ರು. ಆದರೆ, ಈಗ ಪ್ರಹ್ಲಾದ್ ಜೋಶಿಯವರೂ ತುಟಿ ಬಿಚ್ಚುತ್ತಿಲ್ಲ. ಕಲಬುರ್ಗಿ ಅವರ ಹತ್ಯೆ ಆದಾಗಲೂ ಬಿಜೆಪಿ ಮಾತಾಡಿಲ್ಲ. ಈಗ ಚುನಾವಣೆ ಹತ್ತಿರವಾದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group