ವರದಿಗಾರ (04.12.017): ಬಿಜೆಪಿ ನಾಯಕರು ಚುನಾವಣೆ ಸಮೀಪಿಸಿದ ಸಂದರ್ಭದಲ್ಲಿ ಸಾಮರಸ್ಯವನ್ನು ಕದಡುವ ಉದ್ದೇಶಕ್ಕಾಗಿ ಹನುಮ ಜಯಂತಿ. ದತ್ತ ಜಯಂತಿ ಆಚರಣೆಯ ಹೆಸರಿನಲ್ಲಿ ರ್ಯಾಲಿ ಮತ್ತು ಸಮಾವೇಶಗಳನ್ನು ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದರು.
ಒಬ್ಬ ಸಂಸದರಾಗಿ ಪೊಲೀಸರ ಆದೇಶವನ್ನು ಉಲ್ಲಂಘಿಸಿ ಬ್ಯಾರಿಕೇಡ್ ಮೇಲೆ ಕಾರು ಚಲಾಯಿಸಿಕೊಂಡು ಹೋಗುವ ಪ್ರತಾಪ್ ಸಿಂಹ ರಂತವರ ಮನಸ್ಥಿತಿ ಎಂತಹದ್ದು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇಲ್ಲಿನ ಪ್ರತಿಯೊಬ್ಬರೂ ಹನುಮ ಮತ್ತು ರಾಮನನ್ನು ಪೂಜಿಸುತ್ತಾರೆ. ಆದರೆ ಬಿಜೆಪಿಗರು ಜಯಂತಿಯನ್ನು ಸಾಮರಸ್ಯ ಕದಡುವುದಕ್ಕಾಗಿ ಆಚರಿಸುತ್ತಿದ್ದಾರೆ. ಇದಕ್ಕಾಗಿಯೇ ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
