ವರದಿಗಾರ (ಡಿ.03 2017): ಮೈಸೂರಿನ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿಯ ಅಂಗವಾಗಿ ಭಾನುವಾರ ಮೆರವಣಿಗೆ ಆಯೋಜಿಸಲಾಗಿತ್ತು. ಈದ್ ಮಿಲಾದ್ ಹಾಗೂ ಹನುಮಜಯಂತಿ ಒಟ್ಟಿಗೆ ಬಂದಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಪಟ್ಟಣದಲ್ಲಿ ಶನಿವಾರದಿಂದ ನಿಷೇಧಾಜ್ಞೆ ಹೇರಲಾಗಿತ್ತು ಆದರೆ ಕಾನೂನನ್ನು ಉಲ್ಲಂಘಿಸಿ ಮತ್ತು ಪೊಲೀಸರು ಅನುಮತಿ ನೀಡಿದ ಮಾರ್ಗವನ್ನು ಬಿಟ್ಟು ಮೆರವಣಿಗೆ ನಡೆಸಲು ಸಂಘಪರಿವಾರ ಮುಂದಾಗಿದೆ. ಪೊಲೀಸರ ಸೂಚನೆಯನ್ನು ಪಾಲಿಸದ ಸಂಸದ ಪ್ರತಾಪ್ ಸಿಂಹ ಸೇರಿ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಳಿಕ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಎಸ್.ಪಿ. ರವಿ ಡಿ.ಚನ್ನಣ್ಣನವರ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೆಎಸ್ಆರ್ಟಿಸಿ ಮೂರು ಬಸ್ಗಳ ಮೇಳೆ ಕಲ್ಲು ತೂರಲಾಗಿದ್ದು, ಬಸ್ಸು ಜಖಂಗೊಂಡಿವೆ. ಈ ಸಂದರ್ಭ ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
