ರಾಜ್ಯ ಸುದ್ದಿ

ಟಿಪ್ಪು ಸುಲ್ತಾನ್ ರನ್ನು ಹೊಗಳಿದ್ದ ರಾಷ್ಟ್ರಪತಿ ಭಾಷಣ ಬರೆದವರು ಯಾರು? ಆರ್ ಟಿ ಐ ಮಾಹಿತಿಯಲ್ಲಿ ವಿವರ ಬಹಿರಂಗ

ವರದಿಗಾರ (03.12.2017)ಇತ್ತೀಚೆಗೆ ನಡೆದ ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಸದನವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭ  ನೆಲ, ಜಲ, ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂಡಾಡುತ್ತಾ, ಟಿಪ್ಪು ಸುಲ್ತಾನ್‌ ರ ಸಾಧನೆ ಮತ್ತು ಶೌರ್ಯವನ್ನು ಸ್ಮರಿಸಿದ್ದು, ಟಿಪ್ಪು ಸುಲ್ತಾನ್ ಓರ್ವ ಕ್ಷಿಪಣಿ ಜನಕ, ಅದನ್ನು ಯುರೋಪಿಯನ್ನರು ಕೂಡಾ ತಮ್ಮ ತಂತ್ರಜ್ಞಾನದಲ್ಲಿ ಅಳವಡಿಸಿಕೊಂಡಿದ್ದರು. ಟಿಪ್ಪು ಸುಲ್ತಾನ್ ‘ಅಪ್ರತಿಮ ವೀರನಾಗಿದ್ದರು’ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ವೀರ ಮರಣವನ್ನಪ್ಪಿದರೆಂದು ಹಾಡಿ ಹೊಗಳಿದ್ದರು.

ಆದರೆ ಟಿಪ್ಪು ವಿರುದ್ಧ ವ್ಯವಸ್ಥಿತ ಅಪಪ್ರಚಾರಗಳನ್ನು ಮಾಡುತ್ತಿದ್ದ ಬಿಜೆಪಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ರಾಷ್ಟ್ರಪತಿ ಟಿಪ್ಪು ಬಗ್ಗೆ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜು ತಟ್ಟಿ ತಮ್ಮ ಹರ್ಷ ವ್ಯಕ್ತಪಡಿಸಿದ್ದರು . ರಾಷ್ಟ್ರಪತಿಯ ಭಾಷಣವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಸಿದ್ಧಪಡಿಸಿಕೊಟ್ಟಿತ್ತು ಎಂದು ಈ ಸಂದರ್ಭದಲ್ಲಿ ಬಿಜೆಪಿ ಆರೋಪಿಸಿತ್ತು. ಆದರೆ ಆರ್ ಟಿ ಐ ಮೂಲಕ ಪಡೆದ ಮಾಹಿತಿ ಬಿಜೆಪಿಗರಿಗೆ ಮತ್ತೊಮ್ಮೆ ಮುಜುಗರ ತರಿಸುವಂತಹದ್ದಾಗಿದೆ.

ಕರ್ನಾಟಕ ಮೂಲದ ಪಿ ಆದಿತ್ಯ ನಾರಾಯಣ್ ಎನ್ನುವವರು ಈ ಕುರಿತು ಮಾಹಿತಿ ಕೋರಿ ರಾಷ್ಟ್ರಪತಿ ಭವನಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರಪತಿ ಭವನದ ಮೂಲಗಳು, ಕರ್ನಾಟಕ ವಿಧಾನಸೌಧದಲ್ಲಿ ರಾಷ್ಟ್ರಪತಿಗಳು ಮಾಡಿದ್ದ ‘ಭಾಷಣವನ್ನು ತಯಾರಿಸಿದ್ದು ರಾಷ್ಟ್ರಪತಿಗಳ ಸೆಕ್ರೆಟರಿಯೇಟ್’ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭೆಯ ಸಚಿವಾಲಯದ ಕರಡನ್ನು ಉಪಯೋಗಿಸಿಕೊಂಡು ರಾಷ್ಟ್ರಪತಿ ಭವನದ ಸೆಕ್ರೆಟರಿಯೇಟ್ ಈ ಭಾಷಣವನ್ನು ಸಿದ್ಧಪಡಿಸಿರುವುದು ರಾಷ್ಟ್ರಪತಿ ಭವನವೇ ಖಚಿತಪಡಿಸಿದೆ.

ಇದನ್ನೂ ಓದಿ:

ಟಿಪ್ಪು ಸುಲ್ತಾನ್ ಅಪ್ರತಿಮ ವೀರನಾಗಿದ್ದ: ಟಿಪ್ಪು ಸಾಧನೆಯನ್ನು ಸ್ಮರಿಸಿದ ರಾಷ್ಟ್ರಪತಿ-ಬಿಜೆಪಿಗೆ ಮುಖಭಂಗ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group