ರಾಜ್ಯ ಸುದ್ದಿ

ಜಪ್ತಿ ಮಾಡಿದ್ದ 15 ಕೋಟಿಯಲ್ಲಿ 1.60 ಕೋಟಿ ‘ಗುಳುಂ’?

ವರದಿಗಾರ (02.12.2017): ವೈಟ್ ಅಂಡ್ ಬ್ಲಾಕ್ ದಂಧೆಯಿಂದ ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ ಬರೋಬ್ಬರಿ 1.60 ಕೋಟಿ ರೂ. ನಾಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

1.60 ಕೋಟಿ ರೂಪಾಯಿ ಕಾಣೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಆಯುಕ್ತ ಸುನಿಲ್‍ಕುಮಾರ್ ರವರು ಜಪ್ತಿ ಹಣವನ್ನು ಮರು ಎಣಿಕೆ ಮಾಡುವಂತೆ ಸಿಸಿಬಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಯುಕ್ತರ ಸೂಚನೆ ಮೇರೆಗೆ ಜಂಟಿ ಆಯುಕ್ತರು ಮತ್ತು ಡಿಸಿಪಿಯವರು ಸಿಸಿಬಿ ಇನ್ಸ್ ಪೆಕ್ಟರ್ ವಶದಲ್ಲಿದ್ದ 15 ಕೋಟಿ ಹಳೆ ನೋಟುಗಳನ್ನು ಮರು ಎಣಿಕೆ ಮಾಡಿದಾಗ ಆ ಹಣದಲ್ಲಿ 1.60 ಕೋಟಿ ರೂ. ನಾಪತ್ತೆಯಾಗಿರುವುದು ಬಯಲಾಗಿದೆ. ಹಣ ನಾಪತ್ತೆ ಕುರಿತಂತೆ, ಈ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಜಫ್ತಿ ಹಣದ ಉಸ್ತುವಾರಿ ವಹಿಸಿದ್ದ ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತ ಸುನಿಲ್‍ಕುಮಾರ್, ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group