ರಾಷ್ಟ್ರೀಯ ಸುದ್ದಿ

ಅಭ್ಯರ್ಥಿಯ ಮತವನ್ನೇ ನುಂಗಿ ಹಾಕಿದ ಇ ವಿ ಎಂ ಯಂತ್ರ ! ಉತ್ತರ ಪ್ರದೇಶದಲ್ಲಿ ಸೊನ್ನೆ ಸುತ್ತಿದ ಸ್ವತಂತ್ರ ಅಭ್ಯರ್ಥಿ!!

ವರದಿಗಾರ (02.12.2017) : ದೇಶದಾದ್ಯಂತ ಸುದ್ದಿ ಮಾಡುತ್ತಿರುವ ಇ ವಿ ಎಂ ಯಂತ್ರದ ದುರ್ಬಳಕೆಯ ಸಂಶಯ ದಟ್ಟವಾಗಿ ಕಾಣುವ ಘಟನೆಯೊಂದರಲ್ಲಿ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಇತ್ತೀಚೆಗೆ ಕೊನೆಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಹರಾನ್ ಪುರದ ಅಭ್ಯರ್ಥಿ ಶಬಾನಾರವರು ಸೊನ್ನೆ ಮತಗಳನ್ನು ಪಡೆದಿದ್ದು, ಪತ್ರಕರ್ತ ಮುಂದೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ನನ್ನ ಮತವೇ ಬೀಳಲಿಲ್ಲ. ಇ ವಿ ಎಂ ಯಂತ್ರಗಳನ್ನು ದುರ್ಬಳಕೆ ಮಾಡಿರುವುದು ಇದರಲ್ಲಿ ಸ್ಪಷ್ಟವಾಗಿದೆ ಎಂದವರು ಹೇಳುತ್ತಾರೆ.

ಶಬಾನಾರೊಂದಿಗೆ ಆಕೆಯ ಪತಿ ಕೂಡಾ ಧ್ವನಿಗೂಡಿಸಿದ್ದು, ನಮ್ಮ ಮನೆಯಲ್ಲೇ ಕನಿಷ್ಟ ಮೂರು ಮತಗಳು ನಮಗೆ ಬಿದ್ದಿವೆ. ಕುಟುಂಬದ ಮೂಲಗಳಲ್ಲಿ ಕನಿಷ್ಟ 300ಕ್ಕಿಂತಲೂ ಮತಗಳು ಬೀಳಬೇಕಾಗಿತ್ತು. ಒಟ್ಟಾರೆಯಾಗಿ ನಮ್ಮ ಅಂದಾಜಿನ ಪ್ರಕಾರ ಶಬಾನಾಗೆ 900 ಮತಗಳು ಸಿಗಬೇಕಾಗಿತ್ತು. ಆದರೆ ಸೊನ್ನೆ ಗಳಿಕೆ ನಮ್ಮೆಲ್ಲರ ಸಂಶಯ ಬಲವಾಗಿಸಿದೆ, ಇ ವಿ ಎಂ ಯಂತ್ರದ ದುರ್ಬಳಕೆ ನಡೆದಿದೆ. ಈ ಕುರಿತು ತನಿಖೆ ನಡೆಯಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಹರಾನ್’ಪುರದಲ್ಲಿ ಮೊದಲ ಬಾರಿಗೆ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ನಡೆದಿದೆ. ಮತದಾನದ ಸಂದರ್ಭದಲ್ಲಿ ಇಲ್ಲಿ ಹಲವಾರು ಮತದಾರರ ಹೆಸರುಗಳು ಪತದಾರರ ಪಟ್ಟೀಯಿಂದ ನಾಪತ್ತೆಯಾಗಿರುವ ಕುರಿತು ವರದಿಯಾಗಿತ್ತು. ಮತದಾನದ ದಿನದಂದು ಉತ್ತರ ಪ್ರದೇಶದ ಮೀರತ್, ಸಹರಾನ್’ಪುರ ಸೇರಿದಂತೆ ಹಲವು ಕಡೆಗಳಲ್ಲಿ  ಇ ವಿ ಎಂ ಯಂತ್ರಗಳಲ್ಲಿದ್ದ ದೋಷಗಳ ಬಗ್ಗೆ ಜನರು ದೂರು ನೀಡಿದ್ದರು. ಮತದಾರರು ಯಾವುದೇ ಅಭ್ಯರ್ಥಿಗೆ ಬಟನ್ ಒತ್ತಿದರೂ ಅದು ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿತ್ತೆಂದು ಮತದಾದರು ದೂರಿದ್ದರು. ಇದೀಗ ಸ್ವಂತ ಅಭ್ಯರ್ಥಿಯ ಮತವನ್ನೇ ನುಂಗಿ ಹಾಕಿರುವ ಇ ವಿ ಎಂ ಯಂತ್ರದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳೆದ್ದಿದೆ.

ವೀಡಿಯೋ ವೀಕ್ಷಿಸಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group