► ಕಂಡೂ ಕಾಣದಂತೆ ಭಾಷಣ ಮುಂದುವರಿಸಿದ ವಿಜಯ್ ರೂಪಾನಿ!
► ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುವವರ ಅಸಲಿ ಬಣ್ಣ!
ವರದಿಗಾರ(01-12-2017): ಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾನಿಯವರನ್ನು ಭೇಟಿ ಮಾಡಲು ಬಯಸಿದ ಹುತಾತ್ಮ ಸೈನಿಕನ ಮಗಳನ್ನು ಮುಖ್ಯಮಂತ್ರಿಯವರ ಮುಂದೆಯೇ ಪೊಲೀಸರು ಎಳೆದುಕೊಂಡು ಹೋದ ಘಟನೆ ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ನಡೆದಿದೆ.
ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ವಿಜಯ್ ರೂಪಾನಿಯವರನ್ನು ಭೇಟಿ ಮಾಡಲು ಹುತಾತ್ಮ ಸೈನಿಕನ ಮಗಳಾದ ರೂಪಲ್ ಅಶೋಕ್ ತಡ್ವಿ ಮುಂದೆ ಬಂದಿದ್ದಳು. ಆದರೆ ಪೊಲೀಸರು ಅವಳನ್ನು ಬಲವಂತವಾಗಿ ಸಭೆಯಿಂದ ಎಳೆದುಕೊಂಡು ಹೋದರು. ಇದೆಲ್ಲವೂ ತನ್ನ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಆಕೆಯನ್ನು ಬದಿಗೆ ಕರೆದುಕೊಂಡು ಹೋಗಲು ಹೇಳಿ ಮುಖ್ಯಮಂತ್ರಿ ತನ್ನ ರಾಜಕೀಯ ಭಾಷಣ ಮುಂದುವರಿಸಿದರು. ಆಕೆಯ ತಂದೆ ಅಶೋಕ್ ತಡ್ವಿ ಕಾಶ್ಮೀರದಲ್ಲಿ ಹುತಾತ್ಮರಾಗಿದ್ದರು.
ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಆಡಳಿತದಲ್ಲಿರುವ ಗುಜರಾತಿನಲ್ಲಿ, ಅಲ್ಲಿನ ಮುಖ್ಯಮಂತ್ರಿಯವರ ಕಣ್ಣ ಮುಂದೆಯೇ ಹುತಾತ್ಮ ಸೈನಿಕನ ಮಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೋ ವೀಕ್ಷಿಸಿ:
